ಬೀಜಿಂಗ್: ಭಾರತ ಮತ್ತು ಚೀನಾ ಒಳ್ಳೆಯ ನೆರೆ ದೇಶಗಳಾಗಿದ್ದು ಉತ್ತಮ ಸ್ನೇಹಿತರು ಮತ್ತು ಪಾಲುದಾರರು ಎಂದು ಬಣ್ಣಿಸಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ‘ಚೀನಾದ ಡ್ರ್ಯಾಗನ್ ಮತ್ತು ಭಾರತದ ಆನೆ ಒಟ್ಟಿಗೆ ನೃತ್ಯ ಮಾಡುವುದು ಎರಡೂ ದೇಶಗಳಿಗೆ ಸರಿಯಾದ ಆಯ್ಕೆ’ ಎಂದು ಹೇಳಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 77ನೇ ಗಣರಾಜ್ಯೊತ್ಸವದ ಶುಭಾಶಯ ಕೋರಿರುವ ಚೀನಾ ಅಧ್ಯಕ್ಷರು ‘ಭಾರತ– ಚೀನಾ ನಡುವಿನ ಸಂಬಂಧಗಳು ಸುಧಾರಿಸುತ್ತಿದ್ದು ಪ್ರಗತಿ ಸಾದಿಸುತ್ತಿವೆ. ಎರಡೂ ದೇಶಗಳು ಮತ್ತು ಅಲ್ಲಿನ ಜನರ ಮೂಲಭೂತ ಹಿತಾಸಕ್ತಿಗಳು ಹೊಂದಿಕೆಯಾಗುತ್ತವೆ. ವಿಶ್ವಶಾಂತಿ ಮತ್ತು ಸಮೃದ್ಧಿಗಾಗಿ ಉಭಯ ದೇಶಗಳು ಮಹತ್ವದ ಪಾತ್ರ ನಿರ್ವಹಿಸಬೇಕಿದೆ’ ಎಂದು ತಿಳಿಸಿದ್ದಾರೆ.

ಎರಡೂ ದೇಶಗಳು ಸಹಕಾರ ಮತ್ತು ಅಭಿವೃದ್ಧಿಯ ಪಾಲುದಾರರಾಗಿದ್ದು ಸಂಬಂಧಗಳ ಆರೋಗ್ಯಕರ ಮತ್ತು ಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿ ಸಂದೇಶ ಕಳುಹಿಸಿದ್ದಾರೆ.

ಶುಭಾಶಯ ಹೇಳಿದ ಬೆಲರೂಸ್ ಅಧ್ಯಕ್ಷ

ಭಾರತದೊಂದಿಗೆ ತನ್ನ ದೀರ್ಘ ಸಂಬಂಧದ ಕುರಿತು ಬೆಲರೂಸ್ ಹೆಮ್ಮೆಪಡುತ್ತದೆ ಎಂದು ಅಲ್ಲಿನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕಾ ಅವರು ಸೋಮವಾರ ಹೇಳಿದ್ದಾರೆ.

ಅಲೆಕ್ಸಾಂಡರ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 77ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

‘ಈ ದಿನವು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಪ್ರಾಚೀನ ಭಾರತದ ನಾಗರಿಕತೆಯ ವಿವೇಕವನ್ನು ಪ್ರತಿಬಿಂಬಿಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಮೋದಿ ಅವರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.