ಮಾಲೆ: ‘ಮಾಲ್ದೀವ್ಸ್ನೊಂದಿಗೆ ಇನ್ನಷ್ಟು ಬಲವಾದ ಬಾಂಧವ್ಯ ವೃದ್ಧಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರು ಎರಡು ದಿನಗಳ ಮಾಲ್ದೀವ್ಸ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಇಲ್ಲಿನ ಉಪಾಧ್ಯಕ್ಷ ಉಝ್ ಹುಸೇನ್ ಮೊಹಮ್ಮದ್ ಲತೀಫ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದರು.

ಎರಡೂ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಸಂಬಂಧ ಲತೀಫ್ ಅವರೊಂದಿಗೆ ಮಹತ್ವದ ಮಾತುಕತೆಯನ್ನೂ ಪ್ರಧಾನಿ ಮೋದಿ ನಡೆಸಿದರು.

ಮಾಲ್ದೀವ್ಸ್ ಸಂಸತ್ತಿನ ಸ್ಪೀಕರ್ ಅಬ್ದುಲ್ ರೆಹಮಾನ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರು, ಎರಡೂ ದೇಶಗಳ ಮಧ್ಯೆ ‘ಸಂಸತ್ತಿನ ಸ್ನೇಹ ಗುಂಪು’ವೊಂದನ್ನು ರೂಪಿಸಿದ್ದನ್ನು ಸ್ವಾಗತಿಸಿದರು. ಪ್ರಧಾನಿ ಮೋದಿ ಅವರಿಗಾಗಿ ಶುಕ್ರವಾರ ರಾತ್ರಿ ಭೂಜನಕೂಟವನ್ನು ಆಯೋಜಿಸಲಾಗಿತ್ತು.

‘ಬಿಡಿಸಲಾಗದ ಬಾಂಧವ್ಯ’

ಭಾರತ–ಮಾಲ್ದೀವ್ಸ್ ಸಂಬಂಧವು ದ್ವಿಪಕ್ಷೀಯ ಮಾತುಕತೆಗಳನ್ನೂ ಮೀರಿದ ಆಳವಾದ ಬಾಂಧವ್ಯವಾಗಿದೆ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಇದಕ್ಕೆ ಹಿಂದೂ ಮಹಾಸಾಗರವು ಸಾಕ್ಷಿ ಎಂಬಂತಿದೆ. ಎರಡೂ ದೇಶಗಳ ಬೆಳವಣಿಗೆ ವ್ಯಾಪಾರ ಸಂಬಂಧ ನೆರೆಯ ದೇಶಗಳಾಗಿ ಇರುವುದು ಬಿಡಿಸಲಾಗದ ಬಾಂಧವ್ಯ.. ಹೀಗೆ ಎಲ್ಲದಕ್ಕೂ ಈ ಸಮುದ್ರ ಸಾಕ್ಷಿಯಾಗಿದೆ ಮೊಹಮ್ಮದ್ ಮುಯಿಜು ಮಾಲ್ದೀವ್ಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.