ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ ಸಾಧ್ಯತೆ
ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವಿದೇಶಾಂಗ ಇಲಾಖೆಯು ಹೊರಡಿಸಿದ ದೈನಂದಿನ ವೇಳಾಪಟ್ಟಿಯ ಪ್ರಕಾರ ಜೈಶಂಕರ್ ಅವರು ಮಾರ್ಕೊ ರುಬಿಯೊ ಅವರನ್ನು ನ್ಯೂಯಾರ್ಕ್‌ನಲ್ಲಿ ಸೋಮವಾರ ಮುಂಜಾನೆ ಭೇಟಿಯಾಗಲಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಜುಲೈನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಕೊನೆಯ ಬಾರಿ ಜೈಶಂಕರ್ ಹಾಗೂ ಮಾರ್ಕೊ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.