ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮಭೂಮಿ ಟ್ರಸ್ಟ್‌ ಸದಸ್ಯರನ್ನು ಭೇಟಿಯಾದ ಶ್ರೀಲಂಕಾ ಹೈಕಮಿಷನ್‌

Published 22 ಏಪ್ರಿಲ್ 2024, 14:16 IST
Last Updated 22 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀ ರಾಮ ಜನ್ಮ‌ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಭೇಟಿ ಮಾಡಿದ ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್‌ ಸಂತೋಷ್‌ ಝಾ ಅವರು, ರಾಮಾಯಣಕ್ಕೆ ಸಂಬಂಧಿಸಿ ಶ್ರೀಲಂಕಾದಲ್ಲಿರುವ ಕುರುಹುಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ರಾಮಜನ್ಮ ಭೂಮಿ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್‌ ಗಿರಿ ಮಹಾರಾಜ್‌ ಮತ್ತು ಅವರ ತಂಡವನ್ನು ಸಂತೋಷ್‌ ಅವರು ಶ್ರೀಲಂಕಾದಲ್ಲಿನ ಇಂಡಿಯಾ ಹೌಸ್‌ನಲ್ಲಿ ಭಾನುವಾರ ಭೇಟಿ ಮಾಡಿದರು. 

‘ರಾಮಾಯಣ ಪುನರೋತ್ಥಾನ ಯೋಜನೆಯ ಕಾರ್ಯಕ್ರಮದಲ್ಲಿಯೂ ಸಂತೋಷ್‌ ಭಾಗಿಯಾಗಿದ್ದರು. ಈ ಯೋಜನೆಯಿಂದ ಶ್ರೀಲಂಕಾ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಶ್ರೀ ಲಂಕಾದಲ್ಲಿರುವ ಭಾರತೀಯ ಹೈಕಮಿಷನ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT