ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಸೆನೆಟ್‌ಗೆ ಭಾರತೀಯ ಸಂಜಾತ ದೇವ ಶರ್ಮಾ ಆಯ್ಕೆ

Published 27 ನವೆಂಬರ್ 2023, 14:16 IST
Last Updated 27 ನವೆಂಬರ್ 2023, 14:16 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಸಂಸತ್ತಿಗೆ 2019ರಲ್ಲಿ ಆಯ್ಕೆಯಾದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ದೇವ ಶರ್ಮಾ ಅವರು ಈಗ ನ್ಯೂ ಸೌತ್ ವೇಲ್ಸ್ ಲಿಬರಲ್ ಕ್ಷೇತ್ರದಿಂದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ರಾಜಕೀಯಕ್ಕೆ ಮರು ಪ್ರವೇಶ ಮಾಡಿದಂತಾಗಿದೆ.

ಮಾಜಿ ವಿದೇಶಾಂಗ ಸಚಿವ ಮರಿಸ್ ಪೇನ್ ಅವರ ನಿವೃತ್ತಿಯಿಂದಾಗಿ ನ್ಯೂ ಸೌತ್ ವೇಲ್ಸ್ ಲಿಬರಲ್ ಸೆನೆಟ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 47 ವರ್ಷದ ಶರ್ಮಾ ಅವರು 251 ಮತ ಪಡೆದು ಮಾಜಿ ಸಚಿವ ಆ್ಯಂಡ್ರೂ ಕಾನ್‌ಸ್ಟಾನ್ಸ್ ವಿರುದ್ಧ ಜಯಗಳಿಸಿದ್ದಾರೆ.

ಈ ಹಿಂದೆ ಶರ್ಮಾ ಅವರು ಸಿಡ್ನಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, 2022ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದಕ್ಕೂ ಮುನ್ನ ಅವರು 2013ರಿಂದ 2017ರವರೆಗೆ ಇಸ್ರೇಲ್‌ನಲ್ಲಿ ಆಸ್ಟ್ರೇಲಿಯಾದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. 

‘ಮಾಜಿ ಸೆನೆಟರ್ ಪೇನ್ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸೆನೆಟ್‌ಗೆ ಆಯ್ಕೆಯಾಗಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಅವಕಾಶ ಕಲ್ಪಿಸಿದ ಪಕ್ಷದ ಸದಸ್ಯರಿಗೆ ಧನ್ಯವಾದಗಳು. ಸೆನೆಟ್‌ನಲ್ಲಿ ಕಾರ್ಯ ನಿರ್ವಹಿಸುವ ಈ ಅವಕಾಶವು, ನಮ್ಮ ದೇಶ ಎದುರಿಸುತ್ತಿರುವ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೆ ಪೂರಕವಾಗಿ ಹೋರಾಡಲು ಅನುಕೂಲವಾಗಲಿದೆ’ ಎಂದು ಸಂಸದ ದೇವ ಶರ್ಮಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT