ಜಕಾರ್ತ: ಪಶ್ಚಿಮ ಇಂಡೋನೇಷ್ಯಾದ ಸುಮಾತ್ರಾದ್ವೀಪದಲ್ಲಿ ಪ್ರಳಯ ಮತ್ತು ಭೂ ಕುಸಿತದಿಂದಾಗಿ ಮಕ್ಕಳು ಸೇರಿದಂತೆ22 ಮಂದಿ ಸಾವಿಗೀಡಾಗಿದ್ದಾರೆ.17 ಮಂದಿಗೆ ಗಂಭೀರ ಗಾಯಗಳಾಗಿವೆ.ಹಲವಾರು ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.

ಬುಧವಾರದಿಂದ ಇಲ್ಲಿ ಭಾರೀ ಮಳೆಯಾಗಿರುವುದರಿಂದ ಜಲ ಪ್ರಳಯ ಜತೆ ಭೂಮಿ ಕುಸಿತಉಂಟಾಗಿದೆ.

ಕಳೆದ ಮೂರು ದಿನಗಳಲ್ಲಿ ಉತ್ತರ ಸುಮಾತ್ರಾ ಪ್ರದೇಶದಲ್ಲಿ ಕನಿಷ್ಠ 17 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಪಶ್ಚಿಮ ಸುಮಾತ್ರಾದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಇಲ್ಲಿನ ಮಾಂಡಯಲಿಂಗ್ ನಟಾಲ್ ಪ್ರಾಂತ್ಯದ ಮೌರಾ ಸಲಾದಿ ಗ್ರಾಮದಲ್ಲಿರುವ ಇಸ್ಲಾಮಿಕ್ ಬೋರ್ಡಿಂಗ್ ಸ್ಕೂಲ್ನ 11 ಮಕ್ಕಳು ಶುಕ್ರವಾರ ಸಾವಿಗೀಡಾಗಿದ್ದಾರೆ. ಜಲ ಪ್ರಳಯಕ್ಕೆ ಕಟ್ಟಡ ಕುಸಿದು ಈ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ಹೇಳಿದ್ದಾರೆ. ಹಲವಾರು ಮನೆಗಳು ಈ ಪ್ರಕೃತಿ ವಿಕೋಪಕ್ಕೆ ನಾಶವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.