ವಾಷಿಂಗ್ಟನ್: ಕಮಲಾ ಹ್ಯಾರಿಸ್ ಅವರು ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಭ್ರಮದ ನೆನಪಿಗಾಗಿ ಇಲ್ಲಿನ ಐತಿಹಾಸಿಕ ಲಿಂಕನ್ ಸ್ಮಾರಕದ ಎದುರು ಕಮಲಾ ಅವರ ಗಾಜಿನ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ.
ಅಮೆರಿಕದ ಪ್ರಥಮ ಮಹಿಳಾ ಉಪಾಧ್ಯಕ್ಷರು, ಮೊದಲ ಭಾರತೀಯ – ಅಮೆರಿಕನ್ ಉಪಾಧ್ಯಕ್ಷೆ, ಪ್ರಥಮ ಕಪ್ಪು ವರ್ಣದ ಮಹಿಳಾ ಉಪಾಧ್ಯಕ್ಷೆ ಸೇರಿದಂತೆ ಹಲವು ಪ್ರಥಮಗಳ ಸಾಧಕ ಮಹಿಳೆಯಾಗಿರುವ 56 ವರ್ಷದ ಕಮಲಾ ಹ್ಯಾರಿಸ್ ಅವರ ಈ ಗಾಜಿನ ಭಾವಚಿತ್ರ ಫೆಬ್ರುವರಿ 6ರವರೆಗೆ ಲಿಂಕನ್ ಸ್ಮಾರಕದ ಎದುರು ಪ್ರದರ್ಶನಗೊಳ್ಳಲಿದೆ.
ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ಗಾಜಿನ ಭಾವಚಿತ್ರವನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಇತಿಹಾಸ ವಸ್ತುಸಂಗ್ರಹಾಲಯದ ಅಧ್ಯಕ್ಷ ಮತ್ತು ಸಿಇಒ ಹಾಲಿ ಹಾಚ್ನರ್ ಹೇಳಿದರು.