ಬುಧವಾರ, ಮೇ 18, 2022
28 °C

ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧ ಸುಧಾರಣೆಗೆ ಒತ್ತು: ಜೋ ಬೈಡನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ತನ್ನ ಆಡಳಿತ ಒತ್ತು ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

‘ಅಮೆರಿಕದ ರಾಜತಾಂತ್ರಿಕ ವ್ಯವಸ್ಥೆ ವಿಶ್ವ ಸಮುದಾಯದೊಂದಿಗೆ ಹೆಜ್ಜೆ ಹಾಕಲು ಎದುರು ನೋಡುತ್ತಿದೆ. ಕಳೆದು ಹೋದ ದಿನಗಳಲ್ಲಿ ಎದುರಾಗಿದ್ದ ಸವಾಲುಗಳ ಬಗ್ಗೆ ಮಾತನಾಡುವುದಿಲ್ಲ. ಈ ದಿನ, ನಾಳೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅಮೆರಿಕ ಸಿದ್ಧವಾಗಿದೆ’ ಎಂದು ಹೇಳಿದರು.

‘ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಬೇಕೆನ್ನುವ ಚೀನಾದ ಮಹತ್ವಾಕಾಂಕ್ಷೆ, ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹವಣಿಸುತ್ತಿರುವ ರಷ್ಯಾ ಒಡ್ಡಿರುವಂತಹ ಸವಾಲುಗಳನ್ನು ದೇಶದ ನಾಯಕತ್ವ ಎದುರಿಸಬೇಕಾಗಿದೆ’ ಎಂದು ಅವರು ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಿಬ್ಬಂದಿಗೆ ಹೇಳಿದರು.

‘ಕೋವಿಡ್‌–19 ಪಿಡುಗು, ಹವಾಮಾನ ಬದಲಾವಣೆ, ನಿಶ್ಶಸ್ತ್ರೀಕರಣದಂಥ ಸವಾಲುಗಳು ಸಹ ನಮ್ಮ ಮುಂದಿವೆ. ಈ ಸವಾಲುಗಳನ್ನು ಅಮೆರಿಕ ಒಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ಇತರ ದೇಶಗಳೊಂದಿಗೆ ಕೈಜೋಡಿಸಿದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು