ನವದೆಹಲಿ: ಭಾರತ ಅಥ್ಲೆಟಿಕ್ಸ್ ಫೆಡರೇಷನ್ನಿಂದ (ಎಎಫ್ಐ) ನೋಂದಾಯಿತರಲ್ಲದ ಕೋಚ್ಗಳಿಂದ ತರಬೇತಿ ಪಡೆದ ಕ್ರೀಡಾಪಟುಗಳನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಪರಿಗಣಿ ಸುವುದಿಲ್ಲ ಎಂದು ಎಎಫ್ಐ ಹೇಳಿದೆ.

ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿ ಯಂತಹ ರಾಷ್ಟ್ರೀಯ ಗೌರವಗಳಿಗೂ ಇದು ಅನ್ವಯವಾಗುತ್ತದೆ. ಕ್ರೀಡೆಯ ರಾಷ್ಟ್ರೀಯ ಸರ್ಕ್ಯೂಟ್ನಲ್ಲಿ ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಅರ್ಹ ಕೋಚ್ಗಳ ನೋಂದಣಿಗೆ ಜುಲೈ 31ರ ಗಡುವನ್ನು ಎಎಫ್ಐ ನಿಗದಿಪಡಿಸಿದೆ.

‘ತರಬೇತುದಾರರು ತಾವೇ ನೋಂದಾಯಿಸಿಕೊಳ್ಳಬೇಕು. ನಂತರ ದಲ್ಲಿ ನೋಂದಾಯಿತ ಕೋಚ್ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ನೋಂದಣಿ ಮಾಡಿಕೊಳ್ಳದ ಕೋಚ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗು ತ್ತದೆ ಎಂದು ಎಎಫ್ಐ ವಕ್ತಾರ ದಿಲ್ ಸುಮರಿವಾಲಾ ಪಿಟಿಐಗೆ ತಿಳಿಸಿದ್ದಾರೆ.

ಅಥ್ಲೀಟ್ಗಳು ನೋಂದಣಿಯಾಗದ ಕೋಚ್ಗಳಿಂದ ತರಬೇತಿ ಪಡೆದು ಪದಕ ಗೆದ್ದರೂ ಅವರನ್ನೂ ರಾಷ್ಟ್ರೀಯ ಪ್ರಶಸ್ತಿಗೆ ಶಿಫಾರಸು ಮಾಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.