ದುಬೈ: ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಬುರ್ಜ್ ಖಲೀಫಾ ಸೇರಿದಂತೆ ಪ್ರಮುಖ ಕಟ್ಟಡಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ವಿದ್ಯುತ್‌ದ್ದೀಪದೊಂದಿಗೆ ಬೆಳಗಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದೆ.

‘ಅಬುಧಾಬಿಯ ರಾಷ್ಟ್ರೀಯ ತೈಲ ಸಂಸ್ಥೆಯ (ಎಡಿಎನ್‌ಒಸಿ) ಮುಖ್ಯ ಕಚೇರಿಯ ಕಟ್ಟಡ ಮತ್ತು ವಿಶ್ವದ ಅತ್ಯಂತ ಎತ್ತರದ ಕಟ್ಟಡಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಗಿಸಲಾಗಿತ್ತು. ಈ ಮೂಲಕ ಯುಎಇ, ಕೋವಿಡ್‌ನ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತಕ್ಕೆ ತನ್ನ ಸಹಕಾರವನ್ನು ಪ್ರದರ್ಶಿಸಿದೆ’ ಎಂದು ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಕೋವಿಡ್ ಸೋಂಕಿನ ವಿರುದ್ಧ ಭಾರತ ಹೋರಾಡುತ್ತಿದೆ. ಈ ಕಷ್ಟಕಾಲವನ್ನು ಎದುರಿಸಲು ಮಿತ್ರ ರಾಷ್ಟ್ರಭಾರತದೊಂದಿಗೆ ಯುಎಇ ನಿಂತಿದೆ. ಇದರ ಪ್ರತೀಕವಾಗಿ ಬುರ್ಜ್ ಖಲೀಫ್‌ದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಗಿಸಲಾಗಿದೆ’ ಎಂದು ಯುಎಇನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಇದರೊಂದಿಗೆ ವಿಡಿಯೊವೊಂದನ್ನು ಹಂಚಿಕೊಂಡಿದೆ.

‘ಈ ಕಷ್ಟದ ಸಮಯದಲ್ಲಿ ಯುಎಇ ತನ್ನ ಆಪ್ತ ಗೆಳೆಯನಿಗೆ ನೀಡಿದ ಬೆಂಬಲಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಯುಎಇನಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಎಡಿಎನ್‌ಒಸಿಯ ಕಟ್ಟಡದಲ್ಲಿ ‘ಸ್ಟೇ ಸ್ಟ್ರಾಂಗ್ ಇಂಡಿಯಾ’ ಎಂಬ ಸಂದೇಶವನ್ನು ಬೆಳಗಿಸಲಾಗಿತ್ತು.

ಯುಎಇನ ವಿದೇಶಾಂಗ ಸಚಿವ ಅಬ್ದುಲ್ ಬಿಲ್ ಜಯೀದ್ ಅಲ್ ನಹ್ಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈ.ಶಂಕರ್ ಅವರೊಂದಿಗೆ ಭಾನುವಾರ ಫೋನ್ ಕರೆಯ ಮೂಲಕ ಮಾತುಕತೆ ನಡೆಸಿದರು. ಈ ವೇಳೆ, ಭಾರತಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದಾಗಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.