ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂಜೆ ಬೇಹುಗಾರಿಕೆ ಆರೋಪ ಎದುರಿಸಬೇಕು: ಅಮೆರಿಕ

Published 21 ಫೆಬ್ರುವರಿ 2024, 15:47 IST
Last Updated 21 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಲಂಡನ್‌: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕದಲ್ಲಿ ಬೇಹುಗಾರಿಕೆ ಆರೋಪ ಕುರಿತ ವಿಚಾರಣೆ ಎದುರಿಸಬೇಕಿದೆ ಎಂದು ಅಮೆರಿಕ ಸರ್ಕಾರದ ವಕೀಲರು ಬುಧವಾರ ಬ್ರಿಟನ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಬ್ರಿಟನ್‌ ಹೈ ಸೆಕ್ಯುರಿಟಿ ಜೈಲಿನಲ್ಲಿ ಅಸ್ಸಾಂಜ್‌ ಬಂಧಿಯಾಗಿದ್ದಾರೆ. ಆಸ್ಟ್ರೇಲಿಯಾದ ಪ್ರಜೆಯಾದ 52 ವರ್ಷದ ಅಸ್ಸಾಂಜೆ ಅವರು ತಮ್ಮ ವೆಬ್‌ಸೈಟ್‌ನಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಸುಮಾರು 15 ವರ್ಷಗಳ ಅರ್ಗೀಕೃತ ದಾಖಲೆಗಳನ್ನು ಪ್ರಕಟಿಸಿದ ಆರೋಪ ಎದುರಿಸುತ್ತಿದ್ದಾರೆ. ಅವರು ಬೇಹುಗಾರಿಕೆಗೆ ಸಂಬಂಧಿಸಿದ 17 ಹಾಗೂ ಕಂಪ್ಯೂಟರ್‌ ದುರುಪಯೋಗದ ಒಂದು ಆರೋಪವನ್ನು ಎದುರಿಸುತ್ತಿದ್ದಾರೆ.

ರಾಜತಾಂತ್ರಿಕ ಮಾಹಿತಿ ಮತ್ತು ಮಿಲಿಟರಿ ಫೈಲ್‌ಗಳನ್ನು ಕದಿಯಲು ಅಮೆರಿಕ ಸೇನೆಯ ಗುಪ್ತಚರ ವಿಶ್ಲೇಷಕ ಚೆಲ್ಸಿಯಾ ಮ್ಯಾನಿಂಗ್‌ಗೆ ಅಸ್ಸಾಂಜ್‌ಗೆ ನೆರವು ನೀಡಿದ್ದಾರೆ ಎಂದು ಅಮೆರಿಕ ಪರ ವಕೀಲರು ಹೇಳಿದ್ದಾರೆ.

ಅಸ್ಸಾಂಜೆ ವಿರುದ್ಧ ಗಂಭೀರ ಕ್ರಿಮಿನಲ್‌ ಅಪರಾಧ ಪ್ರಕರಣ ಇದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಅಮೆರಿಕದ ವಕೀಲರು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT