ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಸೃಷ್ಟಿಸಿದ ಟ್ರಂಪ್ ಪತ್ನಿ ಮೆಲಾನಿಯಾ ಜಾಕೆಟ್‌!

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ, ಪತ್ನಿಯನ್ನು ಸಮರ್ಥಿಸಿದ ಟ್ರಂಪ್‌
Last Updated 22 ಜೂನ್ 2018, 11:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕ– ಮೆಕ್ಸಿಕೊ ಗಡಿಭಾಗದಲ್ಲಿದ್ದ ಟೆಕ್ಸಾಸ್‌ನ ಅಕ್ರಮ ವಲಸಿಗರ ವಲಸೆ ಕೇಂದ್ರಕ್ಕೆ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಗುರುವಾರ ಭೇಟಿ ನೀಡಿದ್ದರು. ಈ ವೇಳೆ ಅವರು ಧರಿಸಿದ್ದ ಜಾಕೆಟ್‌ನಲ್ಲಿದ್ದ ವಾಕ್ಯವೊಂದು ಈಗ ವಿವಾದಕ್ಕೆ ಕಾರಣವಾಗಿದೆ.

ಜಾಕೆಟ್ ಹಿಂಭಾಗದಲ್ಲಿ ‘ನಾನು ಯಾವುದನ್ನೂ ಲೆಕ್ಕಿಸುವುದಿಲ್ಲ, ನೀವು..?‘ ಎಂಬ ವಾಕ್ಯವಿತ್ತು.

ಅಕ್ರಮ ವಲಸಿಗರ ವಿಚಾರದಲ್ಲಿ ಪತಿ ಡೊನಾಲ್ಡ್‌ ಟ್ರಂಪ್‌ ‘ಕಠಿಣ ಗಡಿನೀತಿ’ ಅನುಸರಿಸುವ ಸಂದರ್ಭದಲ್ಲೇ ಮೆಲಾನಿಯಾ ಅವರ ಈ ಭೇಟಿ ಜಾಗತಿಕ ಮಟ್ಟದಲ್ಲಿ ಗಮನಸೆಳೆಯಿತು. ಆದರೆ ಜಾಕೆಟ್‌ನಲ್ಲಿನ ಬರಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಮರ್ಥಿಸಿಕೊಂಡ ಟ್ರಂಪ್‌: ಪತ್ನಿಯ ಜಾಕೆಟ್‌ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ, ಮೆಲಾನಿಯಾ ನಡೆಯನ್ನು ಡೊನಾಲ್ಡ್‌ ಟ್ರಂಪ್ ಟ್ವೀಟ್‌ ಮೂಲಕ ಸಮರ್ಥಿಸಿಕೊಂಡಿದ್ದಾರೆ.

‘ಜಾಕೆಟ್‌ನಲ್ಲಿನ ಬರಹ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿ ಕುರಿತಂತೆ ಇದೆ. ಮಾಧ್ಯಮಗಳು ಎಷ್ಟೊಂದು ಅಪ್ರಾಮಾಣಿಕವಾಗಿವೆ, ಆಕೆ ನಿಜವಾಗಿಯೂ ಯಾವುದಕ್ಕೂ ಕ್ಯಾರೇ ಎನ್ನುವುದಿಲ್ಲ ’ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಹಸ್ಯ ಸಂದೇಶವಿಲ್ಲ: ಜಾಕೆಟ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಮೆಲಾನಿಯಾ ಅವರ ವಕ್ತಾರೆ ಸ್ಟೀಫನೆ ಗ್ರೀಶಂ, ‘ ಇದರಲ್ಲಿ ಯಾವುದೇ ರಹಸ್ಯ ಸಂದೇಶವಿಲ್ಲ, ಮಾಜಿ ರೂಪದರ್ಶಿಯಾಗಿರುವ ಅವರು ತಮ್ಮ ಇಷ್ಟದಂತೆ ಬಟ್ಟೆ ಧರಿಸಿದ್ದಾರೆ. ಆಕೆ ಭೇಟಿ ನೀಡಿದ್ದು ಮಾಧ್ಯಮಗಳಿಗೆ ಪ್ರಾಮುಖ್ಯವಾಗಬೇಕೇ ಹೊರತು, ಆಕೆಯ ಬಟ್ಟೆಯಲ್ಲ’ ಎಂದಿದ್ದಾರೆ.

‘ವಲಸೆ ಕೇಂದ್ರದ ಮಕ್ಕಳ ಕೊಠಡಿಗಳಿಗೆ ಮೆಲಾನಿಯಾ ಭೇಟಿ ನೀಡಿದ ವೇಳೆ ಮಕ್ಕಳು ಎಲ್ಲಿಯವರು, ಅವರ ವಯಸ್ಸು ಎಷ್ಟು ಮತ್ತು ಅವರ ಸ್ನೇಹಿತರಾರು ಎಂಬ ಬಗ್ಗೆ ವಿಚಾರಿಸಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT