ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಅರೇಬಿಯಾದಲ್ಲಿ ವಾಹನ ಓಡಿಸಲು ಮಹಿಳೆಯರಿಗೆ ಅವಕಾಶ

ವಿವಿಧ ನಗರಗಳ ಪ್ರಮುಖ ಬೀದಿಗಳಲ್ಲಿ ಸಂಭ್ರಮಾಚರಣೆ
Last Updated 24 ಜೂನ್ 2018, 17:48 IST
ಅಕ್ಷರ ಗಾತ್ರ

ರಿಯಾದ್‌ (ಎಎಫ್‌ಪಿ): ಇದೇ ಮೊದಲಿಗೆ ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಓಡಿಸಲು ಅನುಮತಿ ನೀಡಲಾಗಿದೆ. ಈವರೆಗೆ ಸೌದಿಯಲ್ಲಿ ಮಹಿಳೆಯರು ವಾಹನ ಚಲಾಯಿಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ.

ಸೌದಿಯ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ತೆಗೆದುಕೊಂಡಿರುವ ಪ್ರಗತಿಪರ ನಿರ್ಧಾರಕ್ಕೆ ಜಾಗತಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸಂಭ್ರಮಾಚರಣೆ: ಚಾಲನಾ ನಿಷೇಧವನ್ನು ಶನಿವಾರ ಮಧ್ಯರಾತ್ರಿಯಿಂದಲೇ ಹಿಂಪಡೆದಿ ರುವಂತೆಯೇ, ಅನೇಕ ಮಹಿಳೆಯರು ರಿಯಾದ್‌ ಹಾಗೂ ಪ್ರಮುಖ ನಗರಗಳಲ್ಲಿ ವಾಹನ ಓಡಿಸಿ ಸಂಭ್ರಮಿಸಿದರು. ಕೆಲವರು ಕಿವಿಗಡಚಿಕ್ಕುವ ಸಂಗೀತ ಹಾಕಿ, ಕಾರು ಓಡಿಸಿದ್ದು ವಿಶೇಷ.

ಮೊದಲ ಬಾರಿ ಕಾರು ಚಲಾಯಿಸಿದವರು ಚಾಲನೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಕುಟುಂಬ ಸದಸ್ಯರ ಜೊತೆ ನಗರದ ಪ್ರಮುಖ ಬೀದಿಗಳಲ್ಲಿ ಕಾರಿನಲ್ಲಿ ಸುತ್ತಾಡಿ ಖುಷಿ ಹಂಚಿಕೊಂಡರು.

‘ಸೌದಿ ಮಹಿಳೆಯರ ಪಾಲಿಗೆ ನಿಜಕ್ಕೂ ಇದು ಐತಿಹಾಸಿಕ ಕ್ಷಣ’ ಎಂದು ‌ಬಹರೇನ್‌ನ ಗಡಿಯುದ್ಧಕ್ಕೂ ರಾತ್ರಿ ತನ್ನ ವಾಹನ ಚಲಾಯಿಸಿದ ಟಿವಿ ನಿರೂಪಕಿ ಸಬಿಕಾ ಅಲ್‌ ದೊಸಾರಿ ಹರ್ಷ ವ್ಯಕ್ತಪಡಿಸಿದರು.

ಮಹತ್ವದ ನಿರ್ಧಾರ: ನಿಷೇಧ ಹಿಂಪಡೆದ ನಿರ್ಧಾರಕ್ಕೆ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಅತ್ಯಂತ ಮಹತ್ವದ ನಿರ್ಧಾರ ಎಂದೇ ಪರಿಗಣಿಸಲಾಗಿದೆ. ಇದರಿಂದ ಸ್ವಂತ ವಾಹನವಿದ್ದರೂ, ಇನ್ನೊಬ್ಬರನ್ನು ಅವಲಂಬಿಸುವ ಪ್ರಮೇಯದಿಂದ ಇಲ್ಲಿನವರು ಪಾರಾಗಿದ್ದಾರೆ.

ತಕ್ಷಣ ಲೈಸೆನ್ಸ್‌ ಸಿಗಲ್ಲ:ಮಹಿಳೆಯರಿಗೆ ಕಾರು ಚಾಲನೆ ಮಾಡಲು ಅನುಮತಿ ಸಿಕ್ಕಿದರೂ, ಎಲ್ಲರೂ ರಸ್ತೆಗಿಳಿಯಲು ಸಾಧ್ಯವಾಗಿಲ್ಲ. ವಿದೇಶದ ವಾಹನ ಚಾಲನಾ ಪರವಾನಗಿ ಹೊಂದಿದವರು ಮಾತ್ರ ಈಗ ಇಲ್ಲಿ ವಾಹನ ಚಲಾಯಿಸಲಿದ್ದಾರೆ. ಹೊಸ ಕಾನೂನಿನ ಸಾಧಕ ಬಾಧಕಗಳ ಕುರಿತಂತೆ ಸರ್ಕಾರ ಪರಾಮರ್ಶೆ ನಡೆಸಿ, ನಂತರ ಮಹಿಳೆಯರಿಗೆ ಲೈಸೆನ್ಸ್‌ ನೀಡಲಿದೆ.

‘ಇದು ಯಶಸ್ವಿಯಾದರೆ, 2020ರ ವೇಳೆಗೆ 30 ಲಕ್ಷ ಮಹಿಳೆಯರು ಸೌದಿಯಲ್ಲಿ ವಾಹನ ಚಾಲನೆ ಲೈಸೆನ್ಸ್‌ ಪಡೆದುಕೊಳ್ಳಲಿದ್ದಾರೆ’ ಎಂದು ಸಲಹಾಸಂಸ್ಥೆ ಪ್ರೈಸ್‌ವಾಟರ್‌ಹೌಸ್‌ಕಾಪರ್ಸ್‌ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT