ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel–Hamas war | ಮೂವರು ಉಗ್ರರನ್ನು ಹೊಡೆದುರುಳಿಸಿದ್ದೇವೆ: ಇಸ್ರೇಲ್

Published 13 ಜನವರಿ 2024, 2:37 IST
Last Updated 13 ಜನವರಿ 2024, 2:37 IST
ಅಕ್ಷರ ಗಾತ್ರ

ಜೆರುಸಲೇಂ: ಆಕ್ರಮಿತ ವೆಸ್ಟ್‌ ಬ್ಯಾಂಕ್‌ನಲ್ಲಿರುವ ಯಹೂದಿಗಳ ವಸಾಹತುಗಳ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲ್‌ ಸೇನೆ ಶುಕ್ರವಾರ ಹೇಳಿದೆ.

ಹೆಬ್ರೋನ್‌ ನಗರದ ಪಶ್ಚಿಮಕ್ಕೆ 20 ಕಿ.ಮೀ ದೂರದಲ್ಲಿರುವ ಅದೋರ ವಸಾಹತು ಪ್ರದೇಶದಲ್ಲಿ ಉಗ್ರರು ಒಳನುಸುಳಲು ಯತ್ನಿಸಿದ್ದರು. ಕಾರ್ಯಾಚರಣೆ ನಡೆಸಿದ ಇಸ್ರೇಲ್‌ ಯೋಧರು, ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇವರು 16ರಿಂದ 19 ವರ್ಷ ವಯಸ್ಸಿನೊಳಗಿನವರು ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಕಾರ್ಯಾಚರಣೆ ವೇಳೆ ಮತ್ತೊಬ್ಬನ ಕಾಲಿಗೆ ಗಾಯವಾಗಿದೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವಾ ಪಡೆ ತಿಳಿಸಿದೆ. ಆದರೆ, ಗಾಯಾಳುವಿನ ಬಗ್ಗೆ ವಿವರ ನೀಡಿಲ್ಲ. 

ಈ ಬಗ್ಗೆ ಪ್ಯಾಲೆಸ್ಟೀನ್‌ ಅಧಿಕಾರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪ್ರತ್ಯೇಕ ಪ್ರಕರಣದಲ್ಲಿ, ವೆಸ್ಟ್‌ ಬ್ಯಾಂಕ್‌ನ ಜೀಟಾ ನಗರದಲ್ಲಿ ಇಸ್ರೇಲ್‌ ಪಡೆಗಳಿಂದ ಗಂಭೀರವಾಗಿ ದಾಳಿಗೊಳಗಾಗಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪ್ಯಾಲೆಸ್ಟೀನ್‌ ಆರೋಗ್ಯ ಇಲಾಖೆ ಹೇಳಿದೆ.

ಜೆರುಸಲೇಂ ಹೊರತುಪಡಿಸಿ ಅಂದಾಜು 4.9 ಲಕ್ಷ ಇಸ್ರೇಲ್‌ ನಾಗರಿಕರು ವೆಸ್ಟ್‌ ಬ್ಯಾಂಕ್‌ನ ವಸಾಹತು ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಇದು ಅಕ್ರಮವೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT