ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಪ್ರಧಾನಿ ನವಾಜ್ ಷರೀಫ್ 21ರಂದು ಪಾಕಿಸ್ತಾನಕ್ಕೆ

Published 11 ಅಕ್ಟೋಬರ್ 2023, 16:06 IST
Last Updated 11 ಅಕ್ಟೋಬರ್ 2023, 16:06 IST
ಅಕ್ಷರ ಗಾತ್ರ

ಲಂಡನ್‌/ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ನವಾಜ್ ಷರೀಫ್ ಇದೇ 21ರಂದು ಪಾಕಿಸ್ತಾನಕ್ಕೆ ಮರಳಲಿದ್ದು, ತಮ್ಮ ನಾಲ್ಕು ವರ್ಷಗಳ ಸ್ವಯಂ ನಿಯಂತ್ರಿತ ಗಡಿಪಾರು ಕೊನೆಗೊಳಿಸಿಕೊಳ್ಳಲಿದ್ದಾರೆ.

ನವಾಜ್‌ ಷರೀಫ್‌ ಅವರು ಪ್ರಯಾಣಿಸುವ ವಿಮಾನಕ್ಕೆ ‘ಉಮೀದ್–ಇ– ಪಾಕಿಸ್ತಾನ‘ ಎಂದು ಹೆಸರಿಡಲಾಗಿದೆ.

2024ರ ಜನವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷವನ್ನು ಷರೀಫ್‌ ಮುನ್ನಡೆಸುವ ನಿರೀಕ್ಷೆಯಿದೆ. 

‘ಪಾಕಿಸ್ತಾನಕ್ಕೆ ಮರಳುವ ಷರೀಫ್ ಅವರನ್ನು ಬಂಧಿಸುವ ಸಾಧ್ಯತೆಯಿಲ್ಲ. ಅವರು ನ್ಯಾಯಾಲಯದಿಂದ ಜಾಮೀನು ಪಡೆಯಲಿದ್ದಾರೆ. ಕಾನೂನುಗಳನ್ನು ಪಾಲಿಸಲಿದ್ದಾರೆ. ಪಿಎಂಎಲ್‌–ಎನ್‌ನ ಚಿತ್ತ ಆರ್ಥಿಕತೆಯತ್ತ ಮಾತ್ರ. ಕುಸಿದಿರುವ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸುವುದೇ ನವಾಜ್‌ ಗುರಿಯಾಗಿದೆ’ ಎಂದು ಸೆನೆಟರ್‌ ಇಶಾಕ್‌ ದಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT