ವಾಷಿಂಗ್ಟನ್: ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶವನ್ನು ಭಾರತೀಯ–ಅಮೆರಿಕನ್ ನೀರಾ ತಂಡನ್ ಮಂಗಳವಾರ ಹಿಂಪಡೆದಿದ್ದಾರೆ. ಸೆನೆಟ್‌ನಲ್ಲಿ ನೀರಾ ಅವರ ಸ್ಥಾನ ಖಚಿತ ಪಡಿಸುವಷ್ಟು ಮತಗಳನ್ನು ಪಡೆಯುವಲ್ಲಿ ಆಡಳಿತಾರೂಢ ಪಕ್ಷ ವಿಫಲವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಹಿನ್ನಡೆಯಾಗಿದೆ.