ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ಸಶಸ್ತ್ರ ಗುಂಪುಗಳ ದಾಳಿ: 160 ಜನರ ಹತ್ಯೆ 

ನೈಜೀರಿಯಾದಲ್ಲಿ ಜನಾಂಗೀಯ, ಧಾರ್ಮಿಕ ಹಿಂಸಾಚಾರ–ಎರಡು ಗುಂಪುಗಳ ನಡುವೆ ಘರ್ಷಣೆ–100ಕ್ಕೂ ಹೆಚ್ಚು ಜನರು ಸಾವು
Published 26 ಡಿಸೆಂಬರ್ 2023, 3:36 IST
Last Updated 26 ಡಿಸೆಂಬರ್ 2023, 3:36 IST
ಅಕ್ಷರ ಗಾತ್ರ

ಅಬುಜ/ಬೊಕ್ಕಾಸ್‌ (ನೈಜಿರಿಯಾ): ನಿರಂತರವಾಗಿ ಧಾರ್ಮಿಕ ಮತ್ತು ಜನಾಂಗೀಯ ಸಂಘರ್ಷ ಪೀಡಿತವಾಗಿರುವ ನೈಜೀರಿಯಾದಲ್ಲಿ ಕಳೆದ ಎರಡು ದಿನಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ 160ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದಾರೆ. 

ಮಧ್ಯ ನೈಜೀರಿಯಾದಲ್ಲಿ ರೈತರು ಮತ್ತು ಕುರಿಗಾಹಿಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಕುಗ್ರಾಮಗಳ ಮೇಲೆ ಸಶಸ್ತ್ರ ಗುಂಪುಗಳು ಸರಣಿ ದಾಳಿ ನಡೆಸಿವೆ. ಗಾಯಗೊಂಡ 300ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

ದಾಳಿಕೋರರು ಶನಿವಾರ ಮತ್ತು ಭಾನುವಾರದಂದು 17 ಸಮುದಾಯಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಹಲವು ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ ಎಂದು ಪ್ಲೆಟೌ ರಾಜ್ಯದ ಗವರ್ನರ್ ಕ್ಯಾಲೆಬ್ ಮಟ್ಫ್ವಾಂಗ್ ಮಂಗಳವಾರ ನೀಡಿರುವ ಮಾಹಿತಿಯನ್ನು ಸ್ಥಳೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ.

‘ಮಂಗು ಪ್ರದೇಶದಲ್ಲಿ ಬೆಳಿಗ್ಗೆ 15 ಶವಗಳ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಬೊಕ್ಕಾಸ್‌ನಲ್ಲಿ ನೂರಕ್ಕೂ ಹೆಚ್ಚು ಶವಗಳು ಲೆಕ್ಕಕ್ಕೆ ಸಿಕ್ಕಿವೆ. ಬಾರ್ಕಿನ್‌ ಲಡಿಯಲ್ಲಿ ಸತ್ತವರ ಲೆಕ್ಕ ಇನ್ನೂ ನಿಖರವಾಗಿ ಸಿಕ್ಕಿಲ್ಲ. ಪ್ಲೇಟೌನಲ್ಲಿ ಈ ಬಾರಿ ಕ್ರಿಸ್‌ಮಸ್‌ ನಮಗೆ ಭಯಾನಕವಾಗಿದೆ’ ಎಂದು ಕ್ಯಾಲೆಬ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT