ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ: ಡ್ರೋನ್‌ ದಾಳಿಗೆ 85 ಮಂದಿ ನಾಗರಿಕರ ಸಾವು

Published 5 ಡಿಸೆಂಬರ್ 2023, 16:30 IST
Last Updated 5 ಡಿಸೆಂಬರ್ 2023, 16:30 IST
ಅಕ್ಷರ ಗಾತ್ರ

ಲಾಗೋಸ್‌: ನೈಜೀರಿಯಾದ ವಾಯುವ್ಯ ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಮೇಲೆ ಸೇನೆ ನಡೆಸಿದ ಡ್ರೋನ್‌ ದಾಳಿಯಲ್ಲಿ 85 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿ ಸೇನೆಯು ಭಾನುವಾರ ಡ್ರೋನ್‌ಗಳ ಮೂಲಕ ಹಾಕಿದ ಬಾಂಬ್‌ ಗುರಿತಪ್ಪಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದ ನಾಗರಿಕರ ಮೇಲೆ ಬಿದ್ದಿದೆ ಎಂದು ಮೂಲಗಳು ಹೇಳಿವೆ.

ಅಧ್ಯಕ್ಷ ಬೋಲಾ ಅಹಮ್ಮದ್‌ ಟಿನುಬು ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.

‘ಇದುವರೆಗೆ 85 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 66 ಮಂದಿ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ.

ದೇಶದ ವಾಯವ್ಯ ಮತ್ತು ಈಶಾನ್ಯ ಪ್ರದೇಶಗಳಲ್ಲಿರುವ ಸಶಸ್ತ್ರ ಗುಂಪುಗಳು ಮತ್ತು ಉಗ್ರರನ್ನು ಗುರಿಯಾಗಿಸಿ ನೈಜೀರಿಯಾದ ಸಶಸ್ತ್ರ ಪಡೆಗಳು ನಿರಂತರ ವಾಯುದಾಳಿ ನಡೆಸುತ್ತಿವೆ. 

‘ನಾವೆಲ್ಲ ಮನೆಯೊಳಗೆ ಇದ್ದಾಗ ಮೊದಲ ಬಾಂಬ್ ಸ್ಫೋಟಗೊಂಡಿದೆ. ಕೂಡಲೇ ಗಾಯಾಳುಗಳ ರಕ್ಷಣೆಗೆ ಧಾವಿಸಿದಾಗ ಇನ್ನೊಂದು ಬಾಂಬ್‌ ಸ್ಫೋಟಗೊಂಡಿದೆ’ ಎಂದು ಸ್ಥಳೀಯ ನಿವಾಸಿ ಇದ್ರಿಸ್ ದಹಿರು ಹೇಳಿದ್ದಾರೆ.

ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಾಯವ್ಯ ಮತ್ತು ಈಶಾನ್ಯ ನೈಜೀರಿಯಾದಲ್ಲಿ ಸಶಸ್ತ್ರ ಗುಂಪುಗಳು ಅರಣ್ಯ ಪ್ರದೇಶಗಳಲ್ಲಿ ಅವಿತುಕೊಂಡು ಗ್ರಾಮಗಳ ಜನರನ್ನು ದರೋಡೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT