ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಸಂಪನ್ಮೂಲ ಮಾಹಿತಿ ಪಾರದರ್ಶಕವಾಗಿರಲಿ: ಡೊಭಾಲ್‌

Published 26 ಜುಲೈ 2023, 15:50 IST
Last Updated 26 ಜುಲೈ 2023, 15:50 IST
ಅಕ್ಷರ ಗಾತ್ರ

ಜೊಹಾನಸ್‌ಬರ್ಗ್‌: ಗಡಿಗಳ ನಡುವೆ ಹಾದುಹೋಗುವ ಜಲ ಸಂಪನ್ಮೂಲದ ಕುರಿತು ಹಂಚಿಕೆಯಾಗುವ ಮಾಹಿತಿಯಲ್ಲಿ ಪಾರದರ್ಶಕತೆ ಇರಬೇಕು. ನೀರಿನ ವಿಷಯದಲ್ಲಿ ರಾಜಕೀಯ ಮತ್ತು ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಬಲವಾಗಿ ಪ್ರತಿಪಾದಿಸಿದರು.

ಮಂಗಳವಾರ ಬ್ರಿಕ್ಸ್‌ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ ಸಂಪನ್ಮೂಲದ ರಕ್ಷಣೆ ಪ್ರಮುಖ ಜಾಗತಿಕ ವಿಷಯ. ಜಾಗರೂಕ ಬಳಕೆ ಮತ್ತು ಸಂರಕ್ಷಣೆ ಎಲ್ಲರ ಹೊಣೆ ಎಂದು ಹೇಳಿದರು.

ದಕ್ಷಿಣ ಮತ್ತು ಆಗ್ನೇಯ ಏಷ್ಯಾ ದೇಶಗಳ ಜೀವನಾಡಿಯಾಗಿರುವ ಪ್ರಮುಖ ನದಿಗಳಲ್ಲಿ ಚೀನಾ ಅಣೆಕಟ್ಟೆಗಳನ್ನು ನಿರ್ಮಿಸಿರುವ ಬಗ್ಗೆ ಹಲವು ನೀತಿ ನಿರೂಪಕರು ಕಳವಳ ವ್ಯಕ್ತಪಡಿಸಿ ಧ್ವನಿ ಎತ್ತಿದ್ದಾರೆ.

ಭಾರತದ ಮೂಲಕ ಹರಿಯುವ ನದಿಗಳ ನೀರಿನ ಪ್ರಮಾಣದ ಅಂಕಿಅಂಶ ನೀಡುವುದನ್ನು ಚೀನಾ 2017ರಲ್ಲಿ  ನಿಲ್ಲಿಸಿದ್ದು, ಕಳೆದ ವರ್ಷದಿಂದ ಮತ್ತೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT