ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಲಗೈ ಬಂಟ ಜಬೀರ್‌ ಮೋತಿ ಸೆರೆ

Last Updated 19 ಆಗಸ್ಟ್ 2018, 14:15 IST
ಅಕ್ಷರ ಗಾತ್ರ

ಲಂಡನ್‌: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ, ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಜಬೀರ್‌ ಮೋತಿಯನ್ನು ಶುಕ್ರವಾರ ಲಂಡನ್‌ ಪೊಲೀಸರುಬಂಧಿಸಿದ್ದಾರೆ.

ದಾವೂದ್‌ನ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದಬಜೀರ್‌ ಸಿದ್ದಿಕಿ ಅಲಿಯಾಸ್‌ ಜಬೀರ್‌ ಮೋತಿ (51), ದುಬೈ ಮತ್ತು ಬ್ರಿಟನ್‌ನಲ್ಲಿನ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಇಲ್ಲಿನಹಿಲ್ಟನ್‌ ಹೋಟೆಲ್‌ನಲ್ಲಿಶುಕ್ರವಾರ ಬಂಧಿಸಲಾಗಿದೆ ಎಂದು ಲಂಡನ್‌ ಪೊಲೀಸರು ತಿಳಿಸಿದ್ದಾರೆ.

ಜಬೀರ್‌ ಮೋತಿಯ ಪತ್ನಿ, ಸಂಬಂಧಿಕರು ಮತ್ತು ಗೆಳೆಯರು ಕರಾಚಿ ಮತ್ತು ದುಬೈನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಪ್ರಜೆಯಾಗಿರುವ ಜಬೀರ್ ಮೋತಿ, 10 ವರ್ಷಗಳ ಬ್ರಿಟನ್‌ ವೀಸಾ ಪಡೆದುಕೊಂಡಿದ್ದ.ಇವನವಿರುದ್ಧ ಡ್ರಗ್ಸ್‌ ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಿವೆ.

ಜಬೀರ್ ಮೋತಿ ಭಾರತಕ್ಕೆ ಬೇಕಾಗಿರುವುದರಿಂದ ಎರಡು ದೇಶಗಳು ಇವನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಜಬೀರ್‌ ಮೋತಿಯ ಎರಡು ವಿಳಾಸಗಳು ಪತ್ತೆಯಾಗಿವೆ. ಒಂದು ಪಾಕಿಸ್ತಾನ, ಮತ್ತೊಂದು ಭಾರತದ ಮಹಾರಾಷ್ಟ್ರ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಹಂತದಲ್ಲಿ ನಾವುಹೆಚ್ಚಿನನೀಡಲು ಸಾಧ್ಯವಿಲ್ಲ’ ಎಂದು ಲಂಡನ್‌ ಮೆಟ್ರೊಪಾಲಿಟಿನ್‌ಪೊಲೀಸರು ಮಾಧ್ಯಮಗಳಿಗೆತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT