ಕಜಖಸ್ತಾನದ ಅತಿದೊಡ್ಡ ನಗರ ಅಲ್ಮಾಟಿ ವಿದ್ಯುತ್ ಇಲ್ಲದೇ ಸ್ತಬ್ಧವಾಗಿದೆ ಎಂದು ಸುದ್ದಿ ಸಂಸ್ಥೆ ‘ಇಂಟರ್‌ಫ್ಯಾಕ್ಸ್’ ಹೇಳಿದೆ. ತುರ್ಕಿಸ್ತಾನದ ದಕ್ಷಿಣ ಪ್ರದೇಶದಲ್ಲಿ, ವಿಶೇಷವಾಗಿ ಶೈಮ್ಕೆಂಟ್ ನಗರದಲ್ಲಿ ಮತ್ತು ನೆರೆಯ ಜಂಬಿಲ್ ಪ್ರದೇಶದ ತರಾಜ್ ನಗರದಲ್ಲಿಯೂ ವಿದ್ಯುತ್ ಇಲ್ಲವಾಗಿದೆ ಎಂದು ಕಝಕ್ ಸುದ್ದಿ ಮಾಧ್ಯಮ ‘ಒರ್ಡಾ.ಕೆಝಡ್’ ವರದಿ ಮಾಡಿದೆ.
ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ಮತ್ತು ಉತ್ತರ ಚುಯ್ ಪ್ರದೇಶದಲ್ಲಿ ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ ಎಂದು ದೇಶದ ಇಂಧನ ಸಚಿವಾಲಯ ಮತ್ತು ಸ್ಥಳೀಯ ವಿದ್ಯುತ್ ಪೂರೈಕೆದಾರ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಇಂಟರ್‌ಫ್ಯಾಕ್ಸ್’ ವರದಿ ಮಾಡಿದೆ.