ಹನೋಯ್: ತನ್ನ ಬಹುಕಾಲದ ಮಿತ್ರ ರಾಷ್ಟ್ರ ವಿಯೆಟ್ನಾಂಗೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಭಯ ದೇಶಗಳ ಸಂಬಂಧವನ್ನು ಬಲಪಡಿಸಲು ಯತ್ನಿಸಿದ್ದಾರೆ. ಪುಟಿನ್, ಗುರುವಾರ ವಿಯೆಟ್ನಾಂಗೆ ಅಧಿಕೃತ ಭೇಟಿ ನೀಡಿದರು.

ಉಕ್ರೇನ್ ಮೇಲಿನ ತನ್ನ ಮಿಲಿಟರಿ ಕ್ರಮಗಳಿಂದಾಗಿ ವಿದೇಶಗಳ ಅಸಮಾಧಾನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ ಏಕಾಂಗಿಯಾಗುತ್ತಿರುವ ಕಾರಣ ಮಿತ್ರ ರಾಷ್ಟ್ರಗಳತ್ತ ರಷ್ಯಾ ಸ್ನೇಹಹಸ್ತ ಚಾಚಿದೆ.

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹಾಗೂ ಪುಟಿನ್ ಯುದ್ಧದ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದರು. ಕೊರಿಯಾ ಭೇಟಿ ಬಳಿಕ ಪುಟಿನ್ ವಿಯೆಟ್ನಾಂಗೆ ತೆರಳಿದರು.

ಹನೋಯಿಯಲ್ಲಿ ಪುಟಿನ್ ಅವರು ವಿಯೆಟ್ನಾಂನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ನ್ಗುಯೆನ್ ಫು ಟ್ರೋಂಗ್, ಅಧ್ಯಕ್ಷ ಟು ಲ್ಯಾಮ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ಭೇಟಿಯನ್ನು ವಿಯೆಟ್ನಾಂನ ಅಮೆರಿಕದ ರಾಯಭಾರ ಕಚೇರಿಯು ತೀವ್ರವಾಗಿ ಖಂಡಿಸಿತ್ತು. 2017ರ ಬಳಿಕ ಇದೇ ಮೊದಲ ಬಾರಿಗೆ ಪುಟಿನ್ ವಿಯೆಟ್ನಾಂಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.