'ವ್ಯಾಗ್ನರ್' ಗುಂಪು ವಿದೇಶಗಳಲ್ಲಿ ಇಸ್ಲಾಮಿಕ್ ಉಗ್ರರು ಹಾಗೂ ಇತರೆ ಅಪರಾಧಿಗಳ ವಿರುದ್ಧ ಹೋರಾಡುತ್ತಿದೆ ಎಂದು ಯೆವ್ಗೆನಿ ಪ್ರಿಗೋಷಿನ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜೂನ್‌ನಲ್ಲಿ ರಷ್ಯಾ ಪಡೆಗಳು ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ 'ವ್ಯಾಗ್ನರ್' ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್ ಬಂಡಾಯವೆದ್ದಿದ್ದರು. ನಂತರ ಮಾತುಕತೆಗಳ ಮೂಲಕ ಈ ಬಂಡಾಯ ತಣ್ಣಗಾಗಿದೆ.
ಪುಟಿನ್ ಅವರ ಆಪ್ತರಾಗಿದ್ದ ಯೆವ್ಗೆನಿ ಪ್ರಿಗೋಷಿನ್, ಪುಟಿನ್ ಬೆಂಬಲದಿಂದಲೇ 2014ರಲ್ಲಿ ‘ವ್ಯಾಗ್ನರ್’ ಎಂಬ ಖಾಸಗಿ ಮಿಲಿಟರಿ ಪಡೆ ಕಟ್ಟಿದ್ದರು. ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ‘ವ್ಯಾಗ್ನರ್’ ಗುಂಪು ಮಹತ್ವದ ಪಾತ್ರವಹಿಸಿದೆ.