ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ನಂತರ ರಷ್ಯಾ ವಿದೇಶಿ ಸಾಲ ಸುಸ್ತಿದಾರ

Last Updated 27 ಜೂನ್ 2022, 14:25 IST
ಅಕ್ಷರ ಗಾತ್ರ

ಮಾಸ್ಕೊ:ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾಕ್ಕೆಅಮೆರಿಕ ಸೇರಿ ಐರೋಪ್ಯ ರಾಷ್ಟ್ರಗಳು ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿದ ಪರಿಣಾಮ 1918ರ ನಂತರ ಇದೇ ಮೊದಲ ಬಾರಿಗೆ ವಿದೇಶಿ ಸಾಲವನ್ನು ಅಂತಿಮ ಗಡುವಿನೊಳಗೆ ತೀರಿಸಲಾಗದೇ ಸುಸ್ತಿದಾರನಾಗಿದೆ.

ವಿದೇಶಿ ಸಾಲ ಮರುಪಾವತಿಸಲು ರಷ್ಯಾಕ್ಕೆ ಸೋಮವಾರ (ಜೂನ್‌ 27) ಅಂತಿಮ ಗಡುವು ನೀಡಲಾಗಿತ್ತು.

ಪಶ್ಚಿಮದ ರಾಷ್ಟ್ರಗಳ ನಿರ್ಬಂಧಗಳಿಂದಾಗಿ ‌ಜಾಗತಿಕ ಮಾರುಕಟ್ಟೆಯಿಂದ ರಷ್ಯಾವನ್ನು ಹೊರಗಿಟ್ಟ ಪರಿಣಾಮ, ವಿದೇಶಿ ಹೂಡಿಕೆದಾರರಿಗೆ ಹಣ ಪಾವತಿಸಲು ರಷ್ಯಾಕ್ಕೆ ಸಾಧ್ಯವಾಗದಂತಾಗಿದೆ.

ಹೂಡಿಕೆದಾರರಿಗೆ ರಷ್ಯಾವು ಮೇ 27ರಂದೇ ₹7,800 ಕೋಟಿ ಬಡ್ಡಿ ಪಾವತಿಸಬೇಕಿತ್ತು. ಆಗ ಪಾವತಿಸಲು ಅಸಾಧ್ಯವಾಗಿದ್ದಕ್ಕೆ ಮತ್ತೊಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಆದರೆ ರಷ್ಯಾ ಸಾಲ ಮರುಪಾವತಿಸಲು ವಿಫಲವಾಗಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT