ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಟೊ ಪ್ಲಸ್‌ಗೆ ಭಾರತ: ಸೆನೆಟ್‌ನಲ್ಲಿ ಮಸೂದೆ ಮಂಡನೆಗೆ ಸಿದ್ಧತೆ– ಅಮೆರಿಕ 

Published 21 ಜೂನ್ 2023, 14:18 IST
Last Updated 21 ಜೂನ್ 2023, 14:18 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರತವನ್ನು ನ್ಯಾಟೊ ಪ್ಲಸ್‌ ಗುಂಪಿನ ಭಾಗವನ್ನಾಗಿಸಲು ಸೆನೆಟ್‌ನಲ್ಲಿ ಮಸೂದೆ ಮಂಡಿಸಲು ಯೋಜಿಸಿರುವುದಾಗಿ ಅಮೆರಿಕದ ಪ್ರಭಾವಿ ಸೆನೆಟರ್‌ಗಳು ಹೇಳಿದ್ದಾರೆ.

ಹೆಚ್ಚುತ್ತಿರುವ ಚೀನಾದ ಸವಾಲುಗಳನ್ನು ಮೆಟ್ಟಿನಿಲ್ಲಲು ಭಾರತಕ್ಕೆ ಅಮೆರಿಕದ ಅತ್ಯುನ್ನತ ತಂತ್ರಜ್ಞಾನ ಮತ್ತು ರಕ್ಷಣಾ ಸಾಧನಗಳನ್ನು ಯಾವುದೇ ಅಧಿಕಾರಶಾಹಿಯ ಅಡೆತಡೆ ಇಲ್ಲದೆ ವರ್ಗಾಯಿಸಲು ಈ ಮಸೂದೆಯಿಂದ ಅವಕಾಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.  

‘ಅಮೆರಿಕದ ರಕ್ಷಣಾ ಸಂಬಂಧಗಳ ಒಪ್ಪಂದ ಜತೆಗೆ ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಮೇಲ್ದರ್ಜೆಗೇರಿಸುವ ರಕ್ಷಣಾ ಅಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾದ ಸ್ವತಂತ್ರ ಮಸೂದೆಯನ್ನು ಈ ವಾರ ಮಂಡಿಸಲಾಗುವುದು’ ಎಂದು ಸೆನೆಟರ್ ಮಾರ್ಕ್ ವಾರ್ನರ್ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಟೊ ಪ್ಲಸ್ ಪ್ರಸ್ತುತ ನ್ಯಾಟೊ ಪ್ಲಸ್‌ 5 ಆಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಈ ಗುಂಪಿನಲ್ಲಿವೆ. ಈ ಐದು ಮಿತ್ರ ರಾಷ್ಟ್ರಗಳು ಮತ್ತು ನ್ಯಾಟೊ ನಡುವೆ ರಕ್ಷಣಾ ಮತ್ತು ಗುಪ್ತಚರ ಮಾಹಿತಿಗಳ ವಿನಿಮಯದ ಜತೆಗೆ ನ್ಯಾಟೊದೊಂದಿಗೆ ಒಟ್ಟುಗೂಡಿಸುವ, ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುವ ಗುರಿಯನ್ನು ನ್ಯಾಟೊ 5 ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT