ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಹಂತಕನಿಗೆ ಮರಣದಂಡನೆ

Last Updated 17 ಅಕ್ಟೋಬರ್ 2018, 17:29 IST
ಅಕ್ಷರ ಗಾತ್ರ

ಲಾಹೋರ್‌: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪಾಕಿಸ್ತಾನದ ಸರಣಿ ಹಂತಕನನ್ನು ಬುಧವಾರ ನೇಣಿಗೇರಿಸಲಾಗಿದೆ.

ಹಂತಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಬಾಲಕಿಯ ತಂದೆ ಮಾಡಿದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದ ಬೆನ್ನಲ್ಲೇ ಶಿಕ್ಷೆ ಜಾರಿಗೊಳಿಸಲಾಗಿದೆ. ಮ್ಯಾಜಿಸ್ಟೇಟ್‌, ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಅವರ ಸಮ್ಮುಖದಲ್ಲಿಯೇ ಕೋಟ್‌ ಲಖ್‌ಪತ್ ಕೇಂದ್ರ ಕಾರಾಗೃಹದಲ್ಲಿ ನೇಣಿಗೆ ಹಾಕಲಾಗಿದೆ ಎಂದು ಡಾನ್‌ಪತ್ರಿಕೆ ವರದಿ ಮಾಡಿದೆ.

ಈ ವರ್ಷದ ಆರಂಭದಲ್ಲಿ ಕಸೂರ್‌ ಎಂಬಲ್ಲಿ ಏಳು ವರ್ಷದ ಬಾಲಕಿ ಮೇಲೆ ಇಮ್ರಾನ್ ಅಲಿ (23) ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.

ಅತ್ಯಾಚಾರದ ನಂತರ ಶವ ಕಸದ ತೊಟ್ಟಿಯಲ್ಲಿ ಎಸೆದು ಪರಾರಿಯಾಗಿದ್ದ ಅಲಿಯನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಘಟನೆ ಖಂಡಿಸಿ ಹಾಗೂ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಈ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT