ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮೇಲೆ ಲಘು ವಿಮಾನ ಪತನ: ಹಲವು ಮಂದಿ ಸಾವು

Published 2 ಫೆಬ್ರುವರಿ 2024, 14:06 IST
Last Updated 2 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ಕ್ಲಿಯರ್‌ವಾಟರ್‌ (ಅಮೆರಿಕ): ಫ್ಲೋರಿಡಾದಲ್ಲಿ ಲಘು ವಿಮಾನವೊಂದು ಮನೆಯ ಮೇಲೆ ಪತನಗೊಂಡು ಹಲವು ಮಂದಿ ಮೃತಪಟ್ಟಿದ್ದಾರೆ.

ಸಮುದ್ರ ದಂಡೆಯ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮನೆಯ (ಮೊಬೈಲ್‌ ಹೋಮ್‌ ಪಾರ್ಕ್‌) ಮೇಲೆ ವಿಮಾನ ಪತನಗೊಂಡ ಪರಿಣಾಮವಾಗಿ ವಿಮಾನದಲ್ಲಿದ್ದ ಎಲ್ಲರೂ ಹಾಗೂ ಮನೆಯಲ್ಲಿದ್ದ ಕೆಲವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಎಂಜಿನ್‌ ವೈಫಲ್ಯದಿಂದಾಗಿ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.

ವಿಮಾನವು ಅಪ್ಪಳಿಸಿರುವ ಮನೆಯ ಸಮೀಪದ ಎರಡು ಮನೆಗಳು ಕೂಡ ಬೆಂಕಿಗಾಹುತಿಯಾಗಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT