ದಾಳಿಯಲ್ಲಿ ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ. 21 ವರ್ಷದ ಮೆರ್ಟ್ ನೇಯ್ ಎಂಬಾತನೇ ಹುಚ್ಚುಚ್ಚಾಗಿ ರೇಗಾಡುತ್ತ ಚಾಕು ಹಿಡಿದು ಓಡಾಡಿದವನು. ಈತ ಮಾನಸಿಕ ಅಸ್ವಸ್ಥನಾಗಿದ್ದು, ಇದು ಯಾವುದೇ ಭಯೋತ್ಪಾದಕ ದಾಳಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಿಂಗ್ ಸ್ಟ್ರೀಟ್ನಲ್ಲಿ ಮರ್ಸಿಡೀಸ್ ಬೆಂಜ್ ಕಾರಿನ ಬಾನೆಟ್ ಮೇಲಿಂದ ಜಿಗಿದು ಚಾಕು ತೋರಿಸುತ್ತ ಭಯದ ವಾತಾವರಣ ಸೃಷ್ಟಿಸಿದ್ದನ್ನು ಆಸ್ಟ್ರೇಲಿಯಾದ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.