ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಶಾಸಕನಿಂದ ಹಾಡು ನಕಲು’

Last Updated 14 ಏಪ್ರಿಲ್ 2019, 18:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಭಾರತದ ರಾಜಕಾರಣಿಯೊಬ್ಬರು ನಮ್ಮ ಗೀತೆಯನ್ನು ನಕಲು ಮಾಡಿ, ಅದನ್ನು ಭಾರತೀಯ ಸೇನೆಗೆ ಸಮರ್ಪಿಸಿದ್ದಾರೆ’ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

‘ಗೀತೆಯನ್ನು ನಕಲು ಮಾಡಿರುವಂತೆಯೇ ನಮ್ಮ ಹಾಗೆ ಸತ್ಯ ಹೇಳುವುದನ್ನೂ ನಕಲು ಮಾಡಿ’ ಎಂದೂ ಪಾಕಿಸ್ತಾನದ ಸೇನೆ ಕುಟುಕಿದೆ.

ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಠಾಕೂರ್‌ ರಾಜಾ ಸಿಂಗ್‌ ಲೋಧ್‌ ಅವರು ‘ಭಾರತೀಯ ಸೇನೆಗೆ ಅರ್ಪಿಸಿರುವ ನನ್ನ ಹೊಸ ಗೀತೆಯನ್ನು ರಾಮ ನವಮಿ ದಿನವಾದ ಏಪ್ರಿಲ್‌ 14ರಂದು ಬೆಳಿಗ್ಗೆ 11.45ಕ್ಕೆ ಬಿಡುಗಡೆ ಮಾಡಲಾಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಜಿಂದಾಬಾದ್‌ ಹಿಂದೂಸ್ತಾನ್’ ಎಂದು ಈ ಗೀತೆ ಆರಂಭವಾಗುತ್ತದೆ. ಆದರೆ, ಈ ಹಾಡು ಮೂಲದಲ್ಲಿ ‘ಜಿಂದಾಬಾದ್‌ ಪಾಕಿಸ್ತಾನ್’ ಎಂದಿದೆ. ಅದನ್ನು ಲೋಧ್‌ ಅವರು ಬದಲಾಯಿಸಿದ್ದಾರೆ ಎಂದು ತೆಲಂಗಾಣದ ಮಾಧ್ಯಮಗಳು ವರದಿ
ಮಾಡಿವೆ.

ಸಾಹಿರ್‌ ಅಲಿ ಬಗ್ಗಾ ಎಂಬ ಕವಿ ಬರೆದಿರುವ ಈ ಗೀತೆಯನ್ನು ಪಾಕಿಸ್ತಾನ ದಿನಾಚರಣೆಯಂದು (ಮಾರ್ಚ್‌ 23) ಅಲ್ಲಿನ ಸೇನೆ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT