ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ರೂಪಾಯಿ ಬಳಕೆಗೆ ಹಿಂಜರಿಕೆ ಇಲ್ಲ: ಶ್ರೀಲಂಕಾ

Published 15 ಜುಲೈ 2023, 16:09 IST
Last Updated 15 ಜುಲೈ 2023, 16:09 IST
ಅಕ್ಷರ ಗಾತ್ರ

ಕೊಲಂಬೊ: ‘ಶ್ರೀಲಂಕಾವು ಭಾರತದ ರೂಪಾಯಿಯನ್ನು ಸಾಮಾನ್ಯ ಕರೆನ್ಸಿಯಾಗಿ ಅಮೆರಿಕದ ಡಾಲರ್‌ನಂತೆ ಬಳಸುವುದನ್ನು ಎದುರು ನೋಡಲು ಬಯಸುತ್ತದೆ’ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. 

ನವದೆಹಲಿಗೆ ಮೊದಲ ಅಧಿಕೃತ ಭೇಟಿ ಕೈಗೊಳ್ಳಲಿರುವ ಕೆಲವು ದಿನಗಳ ಮೊದಲು, ಈ ವಾರ ಇಲ್ಲಿ ನಡೆದ ’ಇಂಡಿಯನ್ ಸಿಇಒ ಫೋರಂ‘ ಉದ್ದೇಶಿಸಿ ಮಾತನಾಡಿದ ದೇಶದ ಹಣಕಾಸು ಸಚಿವರೂ ಆದ ರನಿಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ಜಪಾನ್, ಕೊರಿಯಾ ಮತ್ತು ಚೀನಾದಂತಹ ದೇಶಗಳನ್ನು ಒಳಗೊಂಡಂತೆ ಪೂರ್ವ ಏಷ್ಯಾವು 75 ವರ್ಷಗಳ ಹಿಂದೆ ಗಮನಾರ್ಹ ಬೆಳವಣಿಗೆ ಕಂಡಂತೆಯೇ, ಈಗ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಭಾರತದ ಸರದಿ ಇದಾಗಿದೆ’ ಎಂದು ವಿಕ್ರಮಸಿಂಘೆ ಬಣ್ಣಿಸಿದರು.

ರನಿಲ್‌ ಅವರು ಮುಂದಿನ ವಾರ ನವದೆಹಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT