ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ನೈಜೀರಿಯಾ: ಉಗ್ರರಿಂದ 11 ರೈತರ ಹತ್ಯೆ

Published 17 ಜೂನ್ 2023, 14:20 IST
Last Updated 17 ಜೂನ್ 2023, 14:20 IST
ಅಕ್ಷರ ಗಾತ್ರ

ಕನೊ, ನೈಜಿರಿಯಾ: ಈಶಾನ್ಯ ನೈಜೀರಿಯಾದಲ್ಲಿ ಶಂಕಿತ ಬೊಕೊ ಹರಾಮ್‌ ಉಗ್ರರು 11 ಮಂದಿ ರೈತರನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಬೊರ್ನೊ ಸಮೀಪದ ಕುವಾಯಾಂಗಿಯಾ ಗ್ರಾಮಕ್ಕೆ ಬೈಕ್‌ನಲ್ಲಿ ತಲುಪಿದ ದಾಳಿಕೋರರು ಹೊಲದಲ್ಲಿ ಕೆಲಸ ಮಾಡುತ್ತಿದ್ದ 11 ಮಂದಿ ರೈತರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದಿವೆ.

ಸಮೀಪ ಪ್ರದೇಶದಲ್ಲಿರುವ ಸೈನಿಕರಿಗೆ ಗುಂಡಿನ ಸದ್ದು ಕೇಳಬಹುದೆಂಬ ಕಾರಣಕ್ಕೆ ಉಗ್ರರು ಬಂದೂಕುಗಳನ್ನು ಬಳಸಿಲ್ಲ ಎಂದೂ ವಿವರಿಸಿವೆ.

ಮೃತರೆಲ್ಲರೂ ಸಮೀಪದ ದಲ್ವಾ ಗ್ರಾಮದ ನಿವಾಸಿಗಳಾಗಿದ್ದಾರೆ. ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಲು 2018ರಿಂದಲೂ ಬೊರ್ನೊ ರಾಜ್ಯಕ್ಕೆ ಬೇರೆ ಪ್ರದೇಶಗಳಿಂದ ಜನರು ಬರುತ್ತಿದ್ದಾರೆ.

ಬೊಕೊ ಹರಾಮ್‌ ಮತ್ತು ಪಶ್ಚಿಮ ಆಫ್ರಿಕಾದ ಐಎಸ್‌ ಉಗ್ರರು ಪದೇ ಪದೇ ರೈತರು, ಮೀನುಗಾರರು, ಕುರಿಗಾಹಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT