ದಾರ್ ಎಸ್ ಸಲಾಮ್ (ಎಎಫ್‌ಪಿ): ತಾಂಜಾನಿಯಾದ ಪೂರ್ವ ಭಾಗದ ಮೆಲೆಲಾ ಕಿಬಾನಿ ಬಳಿ ಶುಕ್ರವಾರ ಸಂಭವಿಸಿದ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ.

‘ಇತರೆ 38 ಮಂದಿ ಗಾಯಗೊಂಡಿದ್ದಾರೆ. ಮೋಟರ್‌ಬೈಕ್ ಹಿಂದಿಕ್ಕುವ ಯತ್ನದಲ್ಲಿ ಲಾರಿ ಚಾಲಕ ವಾಹನ ಮುನ್ನುಗ್ಗಿಸಿದ್ದೆ ಅಪಘಾತಕ್ಕೆ ಕಾರಣ’ ಎಂದು ಮೊರೊಗೊರೊ ವಲಯದ ಪೊಲೀಸ್ ಮುಖ್ಯಸ್ಥ ಫಾರ್ಚುನಾಟಸ್ ಮುಸ್ಲಿಂ ಅವರು ಪ್ರತಿಕ್ರಿಯಿಸಿದ್ದಾರೆ.

ಮೇ 2017ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 32 ಮಕ್ಕಳು ಸೇರಿದಂತೆ 35 ಮಂದಿ ಮೃತಪಟ್ಟಿದ್ದರು. ಅದಕ್ಕೂ ಹಿಂದೆ 2006ರಲ್ಲಿ ಬಸ್ ನದಿಗೆ ಬಿದ್ದು ಸಂಭವಿಸಿದ್ದ ಅಪಘಾತದಲ್ಲಿ 54 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.