ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ: ಮೂವರು ಯೋಧರ ಅಪಹರಣ

Published 9 ಜುಲೈ 2024, 14:29 IST
Last Updated 9 ಜುಲೈ 2024, 14:29 IST
ಅಕ್ಷರ ಗಾತ್ರ

ಪೆಶಾವರ: ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಟೈಂಕ್/ ಜಿಲ್ಲೆಯಲ್ಲಿ ಅರೆಸೇನಾ ಪಡೆಯ ಮೂವರು ಯೋಧರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಯೋಧರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದಾರೆ. ನಂತರ ಯೋಧರ ಎಟಿಎಂ ಕಾರ್ಡ್‌ ಮತ್ತು ಗುರುತಿನ ಚೀಟಿಯನ್ನು ಕಾರಿನ ಚಾಲಕನಿಗೆ ನೀಡಿದ್ದಾರೆ.

‘ಯೋಧರು ರಜೆಯ ಮೇಲೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಹರಣ ನಡೆದಿದೆ’ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

ಕಳೆದ ತಿಂಗಳು ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಭಯೋತ್ಪಾದಕರು ಕನಿಷ್ಠ 13 ಕಾರ್ಮಿಕರನ್ನು ಅಪಹರಣ ಮಾಡಿದ್ದರು. ಇದಾದ ಕೆಲ ಗಂಟೆಗಳ ಒಳಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂಬತ್ತು ಮಂದಿಯನ್ನು ರಕ್ಷಿಸಿದ್ದರು. ಇನ್ನೂ ನಾಲ್ವರು ಉಗ್ರರ ವಶದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT