ನ್ಯೂಯಾರ್ಕ್/ವಾಷಿಂಗ್ಟನ್: ಎಲ್ಲ ದೇಶಗಳ ಮೇಲೆ ಶೇ 15ರಷ್ಟು ಪ್ರತಿಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಘೋಷಿಸಿದ್ದಾರೆ.

ಹೊಸ ಪ್ರತಿಸುಂಕ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಶ್ವೇತಭವನ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕವು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಿದ್ದ ಪ್ರತಿಸುಂಕವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ಆದೇಶಿಸಿತ್ತು. ಬಳಿಕ ಟ್ರಂಪ್ ಕೈಗೊಂಡ ಕ್ರಮದಿಂದಾಗಿ, ಭಾರತದ ಮೇಲಿನ ಪ್ರತಿಸುಂಕವು ಶೇ 18ರಿಂದ ಶೇ 10ಕ್ಕೆ ಇಳಿಕೆಯಾಗಿತ್ತು. ಈಗ, ಟ್ರಂಪ್ ಅವರ ಹೊಸ ಘೋಷಣೆಯಿಂದಾಗಿ ಪ್ರತಿಸುಂಕವು ಶೇ 15ರಷ್ಟಾಗಲಿದೆ

ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಆರಂಭಗೊಂಡಿದೆ. ನಾವು ಈ ಒಪ್ಪಂದವನ್ನು ವಿಭಿನ್ನ ರೀತಿಯಲ್ಲಿ ಮಾಡಿಕೊಳ್ಳಲಿದ್ದೇವೆ
ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ

ಅಧ್ಯಕ್ಷರ ಅಧಿಕಾರ ಬಳಸಿ ಸರ್ಚಾರ್ಜ್

1974ರ ವ್ಯಾಪಾರ ಕಾಯ್ದೆಯ ಅಡಿ ಅಧ್ಯಕ್ಷರಿಗೆ ಕೆಲವು ಆಮದು ನಿರ್ಬಂಧಗಳನ್ನು ಹೇರುವ ಅಧಿಕಾರ ಇದೆ. ಇದರಡಿ ಸರ್ಚಾರ್ಜ್ ವಿಧಿಸಲಾಗಿದೆ ಎಂದು ಶ್ವೇತ ಭವನದ ಫ್ಯಾಕ್ಟ್ಶೀಟ್ ವರದಿ ಹೇಳಿದೆ. ಖನಿಜಗಳು, ಇಂಧನ, ನೈಸರ್ಗಿಕ ಸಂಪನ್ಮೂಲಗಳು, ರಸಗೊಬ್ಬರ ಸೇರಿ ಅಮೆರಿಕದ ಅಗತ್ಯತೆಗೆ ಅನುಗುಣವಾಗಿ ಕೆಲ ಸರಕುಗಳು ಸರ್ಚಾರ್ಜ್ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.