ವಾಷಿಂಗ್ಟನ್: ಚುನಾವಣಾ ಕಾಯ್ದೆ ಮತ್ತು ಮತದಾನದ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ಬದಲಾವಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಪೌರತ್ವ ದಾಖಲೆಗಳು ಕಡ್ಡಾಯವಾಗಿ ಇರವಂತೆ ಹಾಗೂ ಅಮೆರಿಕದ ಪೌರತ್ವ ಹೊಂದಿಲ್ಲದವರು ಚುನಾವಣೆಗೆ ದೇಣಿಗೆ ನೀಡುವುದನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುವ ಪ್ರಕ್ರಿಯೆ ಇದಾಗಿದೆ.

ಈ ಆದೇಶಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಭಾರತ ಮತ್ತು ಬ್ರೆಜಿಲ್ನಲ್ಲಿ ಚಾಲ್ತಿಯಲ್ಲಿರುವ ಚುನಾವಣಾ ಪದ್ಧತಿಗಳನ್ನು ಟ್ರಂಪ್ ಉಲ್ಲೇಖಿಸಿದ್ದಾರೆ. ಮತದಾರರ ಗುರುತಿನ ಚೀಟಿಗೆ ವ್ಯಕ್ತಿಯ ಬೆರಳಚ್ಚು ಇರುವ ದಾಖಲೆ ಜೋಡಣೆಯನ್ನು ಪರಿಗಣಿಸುವ ಸೂಚನೆಯನ್ನು ಟ್ರಂಪ್ ನೀಡಿದ್ದಾರೆ.

ಟ್ರಂಪ್ ಆದೇಶದ ಮುಖ್ಯಾಂಶಗಳು

ಚುನಾವಣೆಗೆ ನೋಂದಾಯಿಸುವ ಮೊದಲು ಪೌರತ್ವ ದಾಖಲೆಯನ್ನು ಸಲ್ಲಿಸಬೇಕು. ಇದರಿಂದ ಅಮೆರಿಕ ನಾಗರಿಕರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯ. ಜತೆಗೆ ಅಮೆರಿಕದ ಮತದಾರರ ಅರ್ಹತಾ ಕಾಯ್ದೆಗಾಗಿ ನಿರೀಕ್ಷಿಸುತ್ತಿರುವ ರಿಪಬ್ಲಿಕನ್ರಿಗೆ ತಾನು ಕಾಯುತ್ತಿಲ್ಲ ಎಂಬ ಸಂದೇಶವನ್ನು ಟ್ರಂಪ್ ನೀಡಿದ್ದಾರೆ.

ಏಕರೂಪತೆ, ರಕ್ಷಣೆ ಮತ್ತು ಜಾರಿ ಈ ಆದೇಶದ ಹಿಂದಿನ ಮುಖ್ಯ ಉದ್ದೇಶವಾಗಿದೆ. ಭಾರತ ಮತ್ತು ಬ್ರೆಜಿಲ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಟ್ರಂಪ್, ಬೆರಳಚ್ಚು ದಾಖಲಾಗಿರುವ ಗುರುತಿನೊಂದಿಗೆ ಮತದಾರರ ಗುರುತಿನ ದಾಖಲೆ ಜೋಡಿಸುವ ಉದ್ದೇಶವನ್ನು ಹೇಳಿದ್ದಾರೆ.

ಅಮೆರಿಕದ ಪ್ರತಿ ರಾಜ್ಯಗಳು ತಮ್ಮಲ್ಲಿರುವ ಮತದಾರರ ದಾಖಲೆಗಳನ್ನು ಆಂತರಿಕ ಭದ್ರತೆ ಹಾಗೂ ಸರ್ಕಾರದ ದಕ್ಷತೆಯ ಇಲಾಖೆಗೆ ಪರಿಶೀಲನೆಗೆ ನೀಡಬೇಕು. ಈ ಇಲಾಖೆಗಳು ಮತದಾರರ ದಾಖಲೆಗಳನ್ನು ಪರಿಶೀಲಿಸಿ, ರಾಜ್ಯಗಳಿಗೆ ಮರಳಿ ನೀಡಲಿವೆ. ಅಮೆರಿಕದ ಅಟಾರ್ನಿ ಜನರಲ್ ಅವರು ಇದಕ್ಕೆ ಕಾನೂನು ರಚಿಸಲಿದ್ದಾರೆ.

ಚುನಾವಣಾ ದಿನ ಮತ ಚಲಾವಣೆ ಅಥವಾ ಮತ ಪಡೆಯಬಹುದು. ಸದ್ಯ 18 ರಾಜ್ಯಗಳಲ್ಲಿ ಚುನಾವಣಾ ದಿನದ ಹಿಂದಿನ ದಿನಾಂಕದ ನಮೂದಾಗಿರುವ ಮತಪತ್ರಗಳನ್ನು ಚುನಾವಣೆ ನಂತರವೂ ಪಡೆಯುವ ಅವಕಾಶವಿದೆ. ಆದರೆ, ಭವಿಷ್ಯದಲ್ಲಿ ಇದಕ್ಕೆ ಅವಕಾಶವಿರದು.

ಅಮೆರಿಕದ ಚುನಾವಣೆಯಲ್ಲಿ ವಿದೇಶಿಯರ ಹಸ್ತಕ್ಷೇಪವನ್ನು ನಿರ್ಬಂಧಿಸುವ ಉದ್ದೇಶದಿಂದ ಹೊಸ ಕಾಯ್ದೆ ತರುವ ಹಾಗೂ ದೇಣಿಗೆ ನೀಡುವುದನ್ನು ತಡೆಯುವ ಅಂಶ ಹೊಸ ಕಾಯ್ದೆಯಲ್ಲಿರಲಿದೆ.

ಮತಪತ್ರದಲ್ಲಿ ಬಾರ್ಕೋಡ್ ಅಥವಾ ಕ್ಯೂಆರ್ ಕೋಡ್ ಅನ್ನೇ ಮುಂದುವರಿಸಬೇಕೇ ಅಥವಾ ಹೊಸ ಮತದಾನ ವ್ಯವಸ್ಥೆಯನ್ನು ಜಾರಿಗೆ ತರುವುದು ಸೂಕ್ತವೇ ಎಂಬುದನ್ನೂ ಪರಿಶೀಲಿಸುವಂತೆ ಆದೇಶದಲ್ಲಿ ಹೇಳಲಾಗಿದೆ. ಇವೆಲ್ಲವೂ ಆರು ತಿಂಗಳ ಒಳಗಾಗಿ ಕೈಗೊಳ್ಳುವಂತೆ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.