ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಧಾರ್ಮಿಕ ಸ್ವಾತಂತ್ರ್ಯ: ಫೆಡರಲ್ ಆಯೋಗದಿಂದ ವಿಚಾರಣೆ

Last Updated 5 ಡಿಸೆಂಬರ್ 2018, 18:12 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ನಂಬಿಕೆಗಳ ಕುರಿತು ಅಮೆರಿಕ ಫೆಡರಲ್ ಆಯೋಗ ಇದೇ 12ರಂದು ವಿಚಾರಣೆ ನಡೆಸಲಿದೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಫೆಡರಲ್ ಆಯೋಗ ಹೊಂದಿದೆ. ಈ ಸ್ವಾಯತ್ತ ಸಂಸ್ಥೆಯು 1998ರಲ್ಲಿ ರಚನೆಯಾಗಿತ್ತು.

‘ಧಾರ್ಮಿಕ ಸ್ವಾತಂತ್ರ್ಯದ ಸವಾಲುಗಳು ಹಾಗೂ ಭಾರತದಲ್ಲಿಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಲು ಇರುವ ಅವಕಾಶಗಳನ್ನು ಆಯೋಗ ಪರಿಶೀಲನೆ ನಡೆಸಲಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗದ (ಯುಎಸ್‌ಸಿಐಆರ್‌ಎಫ್‌) ಮುಖ್ಯಸ್ಥ ತೆನ್ಜಿನ್ ದೊರ್ಜಿ ಹೇಳಿದ್ದಾರೆ.

ದೌರ್ಜನ್ಯ ಹೆಚ್ಚಳ:‘ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಪ್ರಕರಣಗಳು ನಡೆದಿವೆ’ ಎಂದು ದೊರ್ಜಿ ಹೇಳಿದ್ದಾರೆ.

‘ಮೂಲಭೂತವಾದಿಗಳು ಧಾರ್ಮಿಕ ಅಲ್ಪಸಂಖ್ಯಾತರನ್ನು ಬೆದರಿಸುವ, ಕಿರುಕುಳ ನೀಡುವ ಹಾಗೂ ಹತ್ಯೆ ಮಾಡುವ ಘಟನೆಗಳೂ ನಡೆದಿವೆ. ಈ ಎಲ್ಲ ಪ್ರಕರಣಗಳು ಭಾರತೀಯ ಸಂವಿಧಾನವು ಕೋಟ್ಯಂತರ ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳಿಗೆ ನೇರ ಬೆದರಿಕೆ ಒಡ್ಡಿವೆ. ತಮ್ಮ ನಂಬಿಕೆ, ಆಚರಣೆಗಳನ್ನು ಪಾಲಿಸಲು ಜನರಿಗೆ ಅಡ್ಡಿಪಡಿಸಲಾಗುತ್ತಿದೆ’ ಎಂದು ದೊರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT