ವಾಷಿಂಗ್ಟನ್: ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕ ಈ ವರೆಗೆ ₹ 3,656 ಕೋಟಿಗೂ (500 ದಶಲಕ್ಷ ಡಾಲರ್) ಅಧಿಕ ಮೊತ್ತದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ಶ್ವೇತಭವನ ಹೇಳಿದೆ.

‘ಅಮೆರಿಕದ ಒಕ್ಕೂಟ ಸರ್ಕಾರವಲ್ಲದೇ, ವಿವಿಧ ರಾಜ್ಯ ಸರ್ಕಾರಗಳು ಕೂಡ ಪರಿಹಾರ ಸಾಮಗ್ರಿಗಳನ್ನು ಒದಗಿಸಿವೆ. ಹಲವಾರು ಕಂಪನಿಗಳು, ಸಂಘಟನೆಗಳು ನೆರವು ನೀಡಿವೆ. ಹಲವು ವ್ಯಕ್ತಿಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್–19 ಪಿಡುಗಿನಿಂದಾಗಿ ಭಾರತೀಯರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ, ವಿಶ್ವದ ಇನ್ನೂ ಅನೇಕ ರಾಷ್ಟ್ರಗಳು ಸಹ ಈ ಪಿಡುಗಿನಿಂದ ತತ್ತರಿಸಿದ್ದು, ಅವುಗಳಿಗೂ ನೆರವಿನ ಅಗತ್ಯವಿದೆ’ ಎಂದರು.

‘ದಕ್ಷಿಣ ಏಷ್ಯಾದ ಕೆಲವು ರಾಷ್ಟ್ರಗಳಿಗೆ ನೆರವು ನೀಡಲು ಅಧ್ಯಕ್ಷ ಜೋ ಬೈಡನ್ ಆಡಳಿತ ಕಾರ್ಯಪ್ರವೃತ್ತವಾಗಿದೆ. ವಿವಿಧ ವೈದ್ಯಕೀಯ ಪರಿಕರಗಳನ್ನು ಹೊತ್ತ ಏಳು ವಿಮಾನಗಳನ್ನು ಕಳುಹಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.