ಭಾರತ, ಜರ್ಮನಿ, ಮತ್ತು ಜಪಾನ್‌ಗೆ ಶಾಶ್ವತ ಸ್ಥಾನ ನೀಡಬೇಕೆಂದು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸುತ್ತಿರುವುದರ ಅರ್ಥವೇನು ಎಂದು ಸಂವಾದದ ವೇಳೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಥಾಮಸ್– ಗ್ರೀನ್‌ಫೀಲ್ಡ್, ‘ಜಿ 4 ರಾಷ್ಟ್ರಗಳ ಪೈಕಿ ಜಪಾನ್, ಜರ್ಮನಿ ಹಾಗೂ ಭಾರತಕ್ಕೆ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ. ಬ್ರೆಜಿಲ್‌ಗೆ ನಮ್ಮ ಬೆಂಬಲ ವ್ಯಕ್ತಪಡಿಸಿಲ್ಲ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಭದ್ರತಾ ಮಂಡಳಿಯಲ್ಲಿ ಭಾರತ ಇರಬೇಕು ಎಂಬುದನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಭಾರತಕ್ಕೆ ಕಾಯಂ ಸ್ಥಾನ ನಿರಾಕರಿಸಲು ಯಾವುದೇ ಆಧಾರಗಳಿಲ್ಲ’ ಎಂದು ಹೇಳಿದರು.