ವಾಷಿಂಗ್ಟನ್: ‘ಕೋವಿಡ್‌ನಿಂದಾಗಿ ಅಮೆರಿಕ ಮತ್ತು ಭಾರತದಲ್ಲಿರುವ ನನ್ನ 10 ಮಂದಿ ಕುಟುಂಬ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ. ಈ ಅಪಾಯಕಾರಿ ವೈರಸ್‌ನಿಂದ ರಕ್ಷಣೆ ಪಡೆಯಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಅಮೆರಿಕದ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಕೇಳಿಕೊಂಡಿದ್ದಾರೆ.

‘ಕೋವಿಡ್‌ನಿಂದ ಸಂಭವಿಸುವ ಪ್ರತಿಯೊಂದು ಸಾವನ್ನು ಕಂಡಾಗಲೂ ಈ ಸಾವನ್ನು ತಡೆಗಟ್ಟಬಹುದಾಗಿತ್ತು ಎಂಬ ನೋವು ನನ್ನನ್ನು ಕಾಡುತ್ತಲೇ ಇರುತ್ತದೆ. ಕೋವಿಡ್‌ನಿಂದಾಗಿ ಮೃತಪಟ್ಟ ನನ್ನ ಕುಟುಂಬದ 10 ಮಂದಿ ಸದಸ್ಯರು ಸಹ ತಮಗೆ ಲಸಿಕೆ ಪಡೆಯುವ ಅವಕಾಶ ಇತ್ತು ಎಂದು ಹೇಳುತ್ತಲೇ ಇದ್ದರು. ಆದರೆ ಲಸಿಕೆ ತೆಗೆದುಕೊಳ್ಳದೆ ಅವರು ಜೀವ ಕಳೆದುಕೊಳ್ಳುವಂತಾಯಿತು’ ಎಂದು ಅವರು ನೋವು ತೋಡಿಕೊಂಡಿದ್ದಾರೆ.

‘ಇಬ್ಬರು ಎಳೆಯ ಮಕ್ಕಳ ತಂದೆಯಾಗಿ ನಾನು ಹೇಳುವುದೇನೆಂದರೆ, ಮಕ್ಕಳಿಗೆ ಲಸಿಕೆ ಹಾಕಿಸುವ ಅವಕಾಶ ಇನ್ನೂ ದೊರೆತಿಲ್ಲ ಎಂದು ಕೊರಗುವ ಬದಲಿಗೆ, ನಾವು ಮೊದಲಿಗೆ ಲಸಿಕೆ ಹಾಕಿಸಿಕೊಂಡು ನಮ್ಮ ಮಕ್ಕಳಿಗೆ ಕೋವಿಡ್‌ನಿಂದ ರಕ್ಷಣೆ ನೀಡಬೇಕಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ನಾನು ಪ್ರತಿ ವಾರವೂ ವೈದ್ಯರು ಮತ್ತು ದಾದಿಯರನ್ನು ಮಾತನಾಡುತ್ತಿರುವಾಗ ವ್ಯಕ್ತವಾಗುವ ಅಂಶವೆಂದರೆ ಅವರೆಲ್ಲ ಲಸಿಕೆ ಹಾಕಿಸದ ಕೋವಿಡ್ ರೋಗಿಗಳ ಆರೈಕೆ ಮಾಡಿ ಬಳಲಿರುತ್ತಾರೆ. ಈ ರೋಗಿಗಳು ಲಸಿಕೆ ಹಾಕಿಸಿಕೊಳ್ಳದೆ ಇರಲು ಕಾರಣ ತಪ್ಪು ಮಾಹಿತಿಯನ್ನು ಅವರು ನಂಬಿದ್ದು. ಒಂದು ರಾಷ್ಟ್ರವಾಗಿ ನಾವು ಇಂತಹ ತಪ್ಪು ಮಾಹಿತಿಗಳನ್ನು ಎದುರಿಸಬೇಕಾಗಿದೆ. ಸದ್ಯ ಅಮೆರಿಕದಲ್ಲಿ 16 ಕೋಟಿ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇನ್ನೂ ಕೋಟ್ಯಂತರ ಮಂದಿ ಲಸಿಕೆ ಹಾಕಿಸುವುದು ಬಾಕಿ ಇದೆ. ಅವರು ಸುರಕ್ಷಿತವಾಗಿರಬೇಕಿದ್ದರೆ ಲಸಿಕೆ ಹಾಕಿಸಿಕೊಳ್ಳಲೇಬೇಕು’ ಎಂದು ಡಾ.ವಿವೇಕ್ ಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.