ನ್ಯೂಯಾರ್ಕ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

'ವ್ಯಾನ್ಸ್ ಅವರು ಅಮೆರಿಕದ ಎರಡನೇ ಮಹಿಳೆ ಉಷಾ (ಪತ್ನಿ) ಅವರೊಂದಿಗೆ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ' ಎಂದು ಮೂಲಗಳು ತಿಳಿಸಿರುವುದಾಗಿ 'Politico' ವರದಿ ಮಾಡಿದೆ.

'ಅಮೆರಿಕದ ಉಪಾಧ್ಯಕ್ಷರಾದ ನಂತರ ವ್ಯಾನ್ಸ್ ಕೈಗೊಳ್ಳುತ್ತಿರುವ ಎರಡನೇ ವಿದೇಶ ಪ್ರವಾಸ ಇದಾಗಲಿದೆ. ಕಳೆದ ತಿಂಗಳು ಫ್ರಾನ್ಸ್ ಹಾಗೂ ಜರ್ಮನಿಗೆ ಪ್ರವಾಸ ಮಾಡಿದ್ದರು' ಎಂದೂ ಉಲ್ಲೇಖಿಸಲಾಗಿದೆ.

ಉಷಾ ಅವರು ಅಮೆರಿಕದ ಎರಡನೇ ಮಹಿಳೆಯಾದ ನಂತರ ತಮ್ಮ ಪೂರ್ವಜರು ಇರುವ ದೇಶಕ್ಕೆ ಮೊದಲ ಸಲ ಭೇಟಿ ನೀಡುತ್ತಿದ್ದಾರೆ. ಉಷಾ ಅವರ ತಂದೆ–ತಾಯಿ ಕ್ರಿಶ್ ಚಿಲುಕುರಿ ಮತ್ತು ಲಕ್ಷ್ಮೀ ಚಿಲುಕುರಿ ಅವರು ಆಂಧ್ರ ಪ್ರದೇಶದವರು. 1970ರ ದಶಕದಲ್ಲಿ ಅಮೆರಿಕಕ್ಕೆ ತೆರಳಿದ್ದರು.

ವಕೀಲೆಯಾಗಿರುವ ಉಷಾ ಹಾಗೂ ವ್ಯಾನ್ಸ್, ಯೇಲ್ ಲಾ ಸ್ಕೂಲ್ನಲ್ಲಿ ಭೇಟಿಯಾಗಿದ್ದರು.
.ಅಮೆರಿಕದ ಭಾವಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಂಧ್ರದ ಅಳಿಯ!.ಅಮೆರಿಕದ ಎರಡನೇ ಮಹಿಳೆಯಾಗಿ ಆಂಧ್ರದ ಉಷಾ ಚಿಲುಕುರಿ: ಚಂದ್ರಬಾಬು ನಾಯ್ಡು ಸಂತಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.