ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಮಂಡಳಿ ಆಧುನೀಕರಣ ಅವಶ್ಯ: ಅಮೆರಿಕ

ವಿಶ್ವಸಂಸ್ಥೆ ಸುಧಾರಣೆಗಾಗಿ ಭಾರತದ ದೀರ್ಘಕಾಲದ ಪ್ರಯತ್ನಗಳಿಗೆ ಸಿಕ್ಕಿದ ಬೆಂಬಲ
Last Updated 28 ಸೆಪ್ಟೆಂಬರ್ 2022, 13:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಎಲ್ಲರನ್ನು ಹೆಚ್ಚು ಒಳಗೊಳ್ಳುವಂತೆ ಮತ್ತು ಕಾಯಂ ಸದಸ್ಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಮುಖೇನ ಆಧುನೀಕರಣವಾಗಬೇಕಾದ ಅಗತ್ಯವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಒತ್ತಿ ಹೇಳಿದ್ದಾರೆ. ಇದು ಭಾರತದ ದೀರ್ಘಕಾಲದ ಬೇಡಿಕೆಯೂ ಆಗಿದೆ.

ಭದ್ರತಾ ಮಂಡಳಿಯ ತುರ್ತು ಸುಧಾರಣೆಗೆದೀರ್ಘಕಾಲದಿಂದ ಒತ್ತಾಯಿಸುವ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ವಿಶ್ವಸಂಸ್ಥೆಯ ಉನ್ನತ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಹೆಚ್ಚು ಅರ್ಹ ಎನ್ನುವುದು ಬ್ಲಿಂಕನ್‌ ಅವರ ಮಾತಿನಲ್ಲಿ ವ್ಯಕ್ತವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಟ್ಟಿಗೆ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕನ್, ‘ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಎತ್ತಿಹಿಡಿಯಬೇಕು. ಭದ್ರತಾ ಮಂಡಳಿಯು ಎಲ್ಲರನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವುದರ ಜತೆಗೆ ಸಂಸ್ಥೆಯನ್ನು ಆಧುನೀಕರಿಸಬೇಕಾದ ಅವಶ್ಯಕತೆಯನ್ನು ಮನಗಂಡಿದ್ದೇವೆ’ ಎಂದು ತಿಳಿಸಿದರು.

‘ಅದಕ್ಕಾಗಿಯೇ, ಸಾಮಾನ್ಯ ಸಭೆಯ ಭಾಷಣದಲ್ಲಿ ಅಧ್ಯಕ್ಷ ಜೋ ಬೈಡನ್ ಅವರುಭದ್ರತಾ ಮಂಡಳಿಯ ಶಾಶ್ವತ ಮತ್ತು ಶಾಶ್ವತವಲ್ಲದ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆನ್ನುವಭಾರತದ ದೀರ್ಘಕಾಲದ ಬೇಡಿಕೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು’ ಎಂದು ಬ್ಲಿಂಕನ್‌ ಹೇಳಿದರು.

‘ಅಧ್ಯಕ್ಷ ಜೋ ಬೈಡನ್‌ ಅವರು ಸ್ವತಃ ಈ ವಿಷಯ ಪ್ರಸ್ತಾಪಿಸಿದ್ದನ್ನು, ಇದರಲ್ಲಿ ಅಮೆರಿಕ ತೆಗೆದುಕೊಂಡ ಸಕಾರಾತ್ಮಕ ನಡೆಯನ್ನು ನಾವು ಪ್ರಶಂಸಿಸುತ್ತೇವೆ. ಈ ಪ್ರಯತ್ನವನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಲು ನಾವು ಅಮೆರಿಕದ ಜೊತೆಗೂಡಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT