ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಶ್ವೇತಭವನದಲ್ಲಿ ಬಿಳಿ ಪುಡಿ ಪತ್ತೆ; ತನಿಖೆಗೆ ಆದೇಶ

Published 5 ಜುಲೈ 2023, 3:19 IST
Last Updated 5 ಜುಲೈ 2023, 3:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದಲ್ಲಿ ಬಿಳಿ ಪುಡಿ ಪತ್ತೆಯಾಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ವಾಷಿಂಗ್ಟನ್ ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳು ಇದನ್ನು ಕೊಕೇನ್ ಎಂದು ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ.

ಶ್ವೇತ ಭವನದ ವೆಸ್ಟ್‌ ವಿಂಗ್‌ನಲ್ಲಿ ಬಿಳಿ ಪುಡಿ ಪತ್ತೆಯಾಗಿದೆ. ಇದು ಅಧ್ಯಕ್ಷ ಜೋ ಬೈಡನ್ ವಾಸಿಸುವ ಭವನಕ್ಕೆ ಹೊಂದಿಕೊಂಡಿದೆ.

ಇಲ್ಲಿ ಅಧ್ಯಕ್ಷರ ಸಿಬ್ಬಂದಿಗಾಗಿ ಓವಲ್ ಕಚೇರಿ, ಕ್ಯಾಬಿನೆಟ್ ರೂಮ್, ಪತ್ರಿಕಾ ಕೋಣೆ ಮತ್ತು ಕಚೇರಿಗಳನ್ನು ಒಳಗೊಂಡಿದೆ. ಇಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಾರೆ.

ವೆಸ್ಟ್ ವಿಂಗ್‌ನಲ್ಲಿ ಭಾನುವಾರ ಅಜ್ಞಾತ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಶ್ವೇತ ಭವನದ ಸಂಕೀರ್ಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ.

ಭಾನುವಾರದಂದು ಅಧ್ಯಕ್ಷ ಬೈಡನ್ ಶ್ವೇತಭವನದಲ್ಲಿ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT