ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದಲ್ಲಿ ಉಕ್ರೇನ್‌ನ 31 ಸಾವಿರ ಸೈನಿಕರ ಸಾವು: ಝೆಲೆನ್‌ಸ್ಕಿ

Published 25 ಫೆಬ್ರುವರಿ 2024, 16:24 IST
Last Updated 25 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ವಿರುದ್ಧದ ಯುದ್ಧದಲ್ಲಿ ಇದುವರೆಗೆ ಉಕ್ರೇನ್‌ನ 31 ಸಾವಿರ ಯೋಧರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವ್ಲಾದಿಮಿರ್‌ ಝೆಲೆನ್‌ಸ್ಕಿ ಭಾನುವಾರ ಹೇಳಿದರು.

ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು ಇದೇ ಮೊದಲು.

‘ಈ ಯುದ್ಧದಲ್ಲಿ ಉಕ್ರೇನ್‌ನ 31 ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ. ಪುಟಿನ್‌ (ರಷ್ಯಾ ಅಧ್ಯಕ್ಷ) ಮತ್ತು ಅವರ ‘ಸುಳ್ಳಿನ ವಲಯ’  ಹೇಳುವಂತೆ 3 ಲಕ್ಷ ಅಥವಾ 1.50 ಲಕ್ಷ ಯೋಧರನ್ನು ನಾವು ಕಳೆದುಕೊಂಡಿಲ್ಲ. ಆದರೆ ಪ್ರತಿಯೊಬ್ಬ ಸೈನಿಕನ ಸಾವು ಕೂಡಾ ನಮಗೆ ಆಗಿರುವ ಬಲುದೊಡ್ಡ ನಷ್ಟ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯುದ್ಧದಲ್ಲಿ ಗಾಯಗೊಂಡಿರುವ ಸೈನಿಕರ ಸಂಖ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಅದು ರಷ್ಯಾಕ್ಕೆ ಯುದ್ಧ ತಂತ್ರ ರೂಪಿಸಲು ನೆರವಾಗಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT