ಕಾಬೂಲ್ (ಐಎಎನ್ಎಸ್/ಪಿಟಿಐ): 28 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
‘ಆಫ್ಘಾನ್ ಸೇನೆಯು ಕಳೆದ ಒಂದು ದಿನದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಸ್ಥಳೀಯ ದಂಗೆಕೋರ ನಾಯಕ ಸೇರಿದಂತೆ ಕನಿಷ್ಠ 28 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿದೆ’ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯನ್ನು ಉದ್ಧರಿಸಿ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಅಲ್ಲದೇ, ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಎಂದೂ ಅದು ತಿಳಿಸಿದೆ.
ಪಾಕ್ನಿಂದ ಐವರು ಉಗ್ರರ ಬಂಧನ
ಇಸ್ಲಮಾಬಾದ್ ವರದಿ:
ಪಾಕ್ ಸೇನೆಯು ಬಲೂಚಿಸ್ತಾನದ ನೈರುತ್ಯ ಪ್ರಾಂತ್ಯದ ಮೇಲೆ ಸೋಮವಾರ ದಾಳಿ ನಡೆಸಿದ್ದು, ಓರ್ವ ನಾಯಕ ಸೇರಿದಂತೆ ಐವರು ತಾಲಿಬಾನ್ ಉಗ್ರನ್ನು ಬಂಧಿಸಿದೆ.
ಸೇನೆಯು ಸುಳಿವಿನ ಮೇರೆಗೆ ದಾಳಿಯನ್ನು ನಡೆಸಿದ್ದು ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.