ವಾಷಿಂಗ್ಟನ್: ‘2016ರಲ್ಲಿ ಎಚ್1ಬಿ ವೀಸಾ ಪಡೆದವರಲ್ಲಿ ಭಾರತದ ತಾಂತ್ರಿಕ ಪರಿಣತರೇ ಶೇಕಡಾ 74.2ರಷ್ಟಿದ್ದು, ಆದಾದ ಮರುವರ್ಷ ಈ ಸಂಖ್ಯೆ ಶೇಕಡಾ 75.6ಕ್ಕೆ ಏರಿಕೆಯಾಗಿದೆ’ ಎಂದು ಸರ್ಕಾರ ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

ಆದರೂ ಈ ವರ್ಷ, ಎಚ್1ಬಿ ವೀಸಾ ಫಲಾನುಭವಿಗಳಲ್ಲಿ ಭಾರತೀಯರ ಸಂಖ್ಯೆ ತೀವ್ರ ಇಳಿಮುಖ ದಾಖಲಿಸಿದೆ ಎಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಶೇ.9ರಷ್ಟು ಫಲಾನುಭವಿಗಳನ್ನು ಹೊಂದಿರುವ ಚೀನಾವು ಎರಡನೇ ಸ್ಥಾನದಲ್ಲಿದೆ. 2016ರಲ್ಲಿ ಎಚ್1ಬಿ ಪಡೆದವರಲ್ಲಿ ಚೀನಾದವರು ಶೇ.9.3 ರಷ್ಟಿದ್ದು, 2017ರಲ್ಲಿ ಶೇ.9.4ರಷ್ಟಿದ್ದರು.

ಆರಂಭಿಕ ಉದ್ಯೋಗಿಗಳಿಗಾಗಿ 2017ರ ವಿತ್ತವರ್ಷದಲ್ಲಿ ನೀಡಲಾದ ವೀಸಾದಲ್ಲಿ ಭಾರತವು ಶೇಕಡಾ 4.1ರಷ್ಟು ಕುಸಿತ ದಾಖಲಿಸಿದೆ ಎಂದು ಅಮೆರಿಕ ನಾಗರಿಕ ಮತ್ತು ವಲಸೆ ವಿಭಾಗವು (ಯುಎಸ್‌ಸಿಐಎಸ್) ಬಿಡುಗಡೆಗೊಳಿಸಿದ ‘ಉದ್ಯೋಗಿಗಳ ಎಚ್1ಬಿ ವೀಸಾದ ವೈಶಿಷ್ಟ್ಯಗಳು’ ವರದಿ ಹೇಳಿದೆ.

ಹಕ್ಕಾನಿ ವಿರುದ್ಧ ಕ್ರಮಕ್ಕೆ ಒತ್ತಾಯ

ಭಯೋತ್ಪಾದನಾ ನಿಗ್ರಹಕ್ಕಾಗಿ ಹಕ್ಕಾನಿ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಇಸ್ಲಾಮಾಬಾದ್‌ಗೆ ಒತ್ತಡ ಹಾಕಿದರೆ ಮಾತ್ರವೇ ಪಾಕಿಸ್ತಾನಕ್ಕೆ ₹ 2,347 ಕೋಟಿ ಆರ್ಥಿಕ ನೆರವು ನೀಡಲಾಗುವುದು ಎಂದು ಅಮೆರಿಕ ಸಂಸತ್ ಸಮಿತಿ ಷರತ್ತು ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.