ಗ್ವಾಟೆಮಾಲ ಸಿಟಿ: ರಾಜಧಾನಿ ಸಮೀಪದಲ್ಲಿನ ಫ್ಯೂಗೊ ಜ್ವಾಲಾಮುಖಿ ಸ್ಫೋಟಗೊಂಡು ಸೋಮವಾರ ಮೃತರ ಸಂಖ್ಯೆ 62ಕ್ಕೆ ಏರಿದೆ.

ಜ್ವಾಲಾಮುಖಿ ಭಾನುವಾರ ಸ್ಫೋಟಗೊಂಡ ಬಳಿಕ, ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೂದಿ ಆವರಿಸಿದೆ. ಮರಗಿಡ, ವಾಹನ ಮತ್ತು ರಸ್ತೆಗಳು ಬೂದು ಬಣ್ಣಕ್ಕೆ ತಿರುಗಿವೆ. ಬಂಡೆಗಲ್ಲುಗಳು ಉರುಳಿ ಬಿದ್ದಿವೆ.

ಕಣ್ಮರೆಯಾದವರಿಗಾಗಿ ಮತ್ತು ಸಂಕಷ್ಟದಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಪಡೆ ಶೋಧ ಕಾರ್ಯ ಸೋಮವಾರವೂ ಮುಂದುವರಿದಿತ್ತು.

ಜ್ವಾಲಾಮುಖಿ ಸ್ಫೋಟದ ನಂತರ ಕಣ್ಮರೆಯಾದವರ ಸಂಖ್ಯೆ ಇನ್ನೂ ಅಸ್ಪಷ್ಟವಾಗಿದೆ ಎಂದು ಗ್ವಾಟೆಮಾಲಾ ನೈಸರ್ಗಿಕ ವಿಕೋಪ ನಿರ್ವಹಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿಯಿಂದ ಹೊರ ಚೆಲ್ಲುತ್ತಿರುವ ಲಾವಾರಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದವರು ಅದರ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಸುಟ್ಟವರ ಅವಶೇಷಗಳನ್ನು ಹೊರ ತೆಗೆಯಲು ಸಾಧ್ಯವಾಗುತ್ತಿಲ್ಲ. ಮೊಣಕಾಲೆತ್ತರದ ಬೂದಿಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದಾರೆ.

ಅಗ್ನಿ ಪರ್ವತದ ದಕ್ಷಿಣ ಭಾಗವನ್ನು ತಲುಪಲು ರಕ್ಷಣಾ ಪಡೆಗೆ ಸಾಧ್ಯವಾಗುತ್ತಿಲ್ಲ. ಮೃತರ ಸಂಖ್ಯೆ 100ರ ಗಡಿ ದಾಟಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಅಪಾಯದಲ್ಲಿ ಸಿಲುಕಿ, ತೊಂದರೆಗೊಳಗಾದ 24 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ವಾಲಾಮುಖಿಯಿಂದ ಆವರಿಸಿರುವ ಬೂದಿ.

ಮೃತಪಟ್ಟವರ ಸಂಬಂಧಿಗಳು. ಚಿತ್ರ: ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.