ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಕ್ಷಿಪಣಿ ನಿರೋಧಕ ಉಡಾವಣೆ

Last Updated 13 ಮೇ 2019, 20:05 IST
ಅಕ್ಷರ ಗಾತ್ರ

ಬೀಜಿಂಗ್‌:ಚೀನಾದ ನೌಕಾಪಡೆಯು ಎರಡು ನೂತನ ಕ್ಷಿಪಣಿ ನಿರೋಧಕಗಳನ್ನು ಉಡಾವಣೆ ಮಾಡಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ.

ನೌಕಾಪಡೆಯ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸುತ್ತಿರುವ ಚೀನಾ, ಈಗ 052ಡಿ ಮಾದರಿಯ ಮತ್ತೆರಡು ನಿರ್ದೇಶಿತ ಕ್ಷಿಪಣಿ ವಿಧ್ವಂಸಕಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಚೀನಾದ ಅಧಿಕೃತ 'ಗ್ಲೋಬಲ್‌ ಟೈಮ್ಸ್‌' ಪತ್ರಿಕೆ ಹೇಳಿದೆ.

ಈ ಕ್ಷಿಪಣಿಗಳ ಉಡಾವಣೆಯೊಂದಿಗೆ ಇಂತಹ 20 ಕ್ಷಿಪಣಿ ನಿರೋಧಕಗಳು ಚೀನಾ ನೌಕಾಪಡೆ ಹೊಂದಿದಂತಾಗಿದೆ ಎಂದು ಚೀನಾದ ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ.ಬಹಳ ದೂರದಲ್ಲಿರುವ ಸಮರನೌಕೆಗಳ ಮೇಲೆ ವೇಗವಾಗಿ ದಾಳಿ ಮಾಡುವ ಸಾಮರ್ಥ್ಯ ಈ ಕ್ಷಿಪಣಿ ನಿರೋಧಕಗಳಿಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT