ಲಂಡನ್ (ಪಿಟಿಐ): 2007ರಲ್ಲಿ ಪ್ರಸಿದ್ಧ ಬಿಗ್ ಬ್ರದರ್ ಟಿವಿ ಕಾರ್ಯಕ್ರಮದ ಸ್ಪರ್ಧೆ ವಿಜೇತೆ ಮತ್ತು ಭಾರತದ ನಟಿ ಶಿಲ್ಪಾ ಶೆಟ್ಟಿ ಅವರನ್ನು ದೂಷಿಸಿ ಕುಖ್ಯಾತಿಗೆ ಒಳಗಾದ ಜೇಡ್ ಗೂಡಿ ಅವರ ದೂರವಾಣಿಯನ್ನು ಸಹ ಕದ್ದಾಲಿಸಲಾಗಿತ್ತು ಎಂದು ಗೂಡಿ ತಾಯಿ ಆರೋಪಿಸಿದ್ದಾರೆ.

2009ರಲ್ಲಿ ತನ್ನ 27ನೇ ವಯಸ್ಸಿನಲ್ಲಿ ಗೂಡಿ ಕ್ಯಾನ್ಸರ್ಗೆ ಬಲಿಯಾಗಿದ್ದಳು. ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಯನ್ನು ನಿಂದಿಸುವ ಮೂಲಕ ಸಾರ್ವಜನಿಕವಾಗಿ ಹೆಚ್ಚು ಪ್ರಚಾರಕ್ಕೆ ಬಂದಿದ್ದಳು.

`ತನ್ನ ಮತ್ತು ತನ್ನ ಮಗಳ ದೂರವಾಣಿಯನ್ನು ಕದ್ದಾಲಿಸಲಾಗಿದೆ~ ಎಂದು ಗೂಡಿ ತಾಯಿ ಜಾಕಿ ಬಡೆನ್ ಶನಿವಾರ ಆರೋಪಿಸಿದ್ದಾರೆ. ಗೂಡಿಗೆ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾದಾಗ ಅವಳ ಸಾರ್ವಜನಿಕ ಸಂಪರ್ಕಗಳನ್ನು ನಿರ್ವಹಿಸುತ್ತಿದ್ದ ಮ್ಯಾಕ್ಸ್ ಕ್ಲಿಫೋರ್ಡ್ ಪ್ರಕಾರ, `ಜಾಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದ್ದಾರೆ. ನ್ಯೂಸ್ ಆಫ್ ದ ವರ್ಲ್ಡ್ ಪತ್ರಿಕೆ ಈ ಕದ್ದಾಲಿಕೆ ನಡೆಸುತ್ತಿದೆ ಎಂದು ಅವರಿಗೆ ಮನವರಿಕೆಯಾಗಿತ್ತು~ ಎನ್ನುತ್ತಾರೆ.

`ನನ್ನ ದೂರವಾಣಿ ಕದ್ದಾಲಿಸುತ್ತಿರುವುದು ನನಗೆ ಮನವರಿಕೆಯಾಗಿದೆ ಎಂದು ಜೇಡ್ ಹೇಳಿದ್ದಾರೆ~ ಎಂದು ಕ್ಲಿಫೋರ್ಡ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.