ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ತಸಾದುಕ್ ಹುಸೇನ್ ಜಿಲ್ಲಾನಿ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿದರು.
ಅಧ್ಯಕ್ಷ ಮಮ್ನೂನ್ ಹುಸೇನ್ ಅವರ ನಿವಾಸದಲ್ಲಿ ಬೋಧಿಸಲಾದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನವಾಜ್ ಷರೀಫ್ ಹಾಗೂ ನಿವೃತ್ತ ಮುಖ್ಯ ನ್ಯಾ. ಇಫ್ತಿಕಾರ್ ಮೊಹಮ್ಮದ್ ಚೌಧರಿ ಭಾಗವಹಿಸಿದ್ದರು.
ಲಾಹೋರಿನವರಾದ ತಸಾದುಕ್ ಹುಸೇನ್ ಜಿಲ್ಲಾನಿ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಪಂಜಾಬ್ ವಿವಿ
ಯಿಂದ ಕಾನೂನು ಪದವಿ ಹಾಗೂ ಲಂಡನ್ ವಿವಿಯಿಂದ ಸಂವಿಧಾನಿಕ ಕಾನೂನಿನ ಕುರಿತು ಪದವಿ ಪಡೆದವರು.
ಲಾಹೋರ್ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದ ಅವರು ೨೦೦೪ರಲ್ಲಿ ಸುಪ್ರೀಂಕೋರ್ಟ್ಗೆ ನೇಮಕಗೊಂಡಿದ್ದರು.