ನ್ಯೂಯಾರ್ಕ್ (ಪಿಟಿಐ): ಭಾರತಕ್ಕೆ ಅತ್ಯಂತ ಬೇಕಾಗಿರುವ (‘ಮೊಸ್ಟ್ ವಾಂಟೆಂಡ್’) ಉಗ್ರ ದಾವೂದ್ ಇ್ರಬಾಹಿಂ ಪಾಕಿಸ್ತಾನದಲ್ಲಿಲ್ಲ ಎಂದು ಪಾಕ್ನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಇಲ್ಲಿ ಹೇಳಿದರು.
‘ದಾವೂದ್ನನ್ನು ಭಾರತಕ್ಕೆ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮಾತುಕತೆ ಮತ್ತು ಚರ್ಚೆ ನಡೆದಿವೆ. ಆತ ಪಾಕಿಸ್ತಾನದಲ್ಲಿ ಇಲ್ಲ’ ಎಂದು ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತೆ ಮೇಲಿನ ಪಾಕ್ ಪ್ರಧಾನಿಯವರ ಸಲಹೆಗಾರ ಸರ್ತಾಜ್ ಅಜೀಜ್ ಸುದ್ದಿಗಾರರಿಗೆ ತಿಳಿಸಿದರು.